ಬೆಂಗಳೂರು, ಮೇ 8, 2020 (www.justkannada.in): 6 ದಿನದ ವಲಸೆ ಕಾರ್ಮಿಕರ ಕಾರ್ಯಾಚರಣೆಯನ್ನು ಕೆಎಸ್ಆರ್ಟಿಸಿ ಅಂತ್ಯಗೊಳಿಸಿದೆ.
ಕಳೆದ ಆರು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1,08,300 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಹಾಗೂ 3610 ಬಸ್ಸುಗಳನ್ನು ಕಾರ್ಯಚರಣೆ ಮಾಡಲಾಗಿದೆ.
ನಾಳೆಯಿಂದ ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೇವೆ ಇರುವುದಿಲ್ಲ ಎಂದು ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ತಿಳಿಸಿದೆ. ಕೊನೆಯ ದಿನವಾದ ಇಂದು ಸಹ ಬೆಳಗ್ಗೆ 8 ರಿಂದ ಬಸ್ಸುಗಳ ಕಾರ್ಯಾಚರಣೆ ಆರಂಭಿಸಿದ್ದವು.
ಬೆಳಗ್ಗೆ 8 ರಿಂದ 6.40 ರವರೆಗೆ ಗಂಟೆಯವರೆಗೆ ಇಂದು ಒಟ್ಟು 185 ಬಸ್ಸುಗಳನ್ನು, ರಾಜ್ಯದ 43 ಸ್ಥಳಗಳಿಗೆ ಸಂಚಾರ ಮಾಡಿದೆ. ಈ ಮೂಲಕ ಕಾರ್ಮಿಕರಿಗಾಗಿ ಉಚಿತ ಬಸ್ ವ್ಯವಸ್ಥೆ ಇಂದಿಗೆ ಕೊನೆಗೊಂಡಿದೆ.