ನವದೆಹಲಿ,ಜ,31,2020(www.justkannada.in): ಪೌರತ್ವ ಕಾಯ್ದೆ ಜಾರಿ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ. ಈ ಮೂಲಕ ಗಾಂಧೀಜಿ ಕನಸು ನನಸ್ಸು ಮಾಡಿದ್ದೇವೆ ಎಂದು ರಾಷ್ಟ್ರಪತಿ ರಮನಾಥ್ ಗೋವಿಂದ್ ತಿಳಿಸಿದರು.
ಕೇಂದ್ರ ಬಜೆಟ್ ಮೇಲಿನ ಅಧಿವೇಶನದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪ್ರಶಕ್ತ ದಶಕ ನಮ್ಮಲ್ಲರಿಗೂ ಮಹತ್ವದ್ದಾಗಿದೆ. ಭಾರತ ಸಂವಿಧಾನ ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದರು.
ರಾಮಜನ್ಮಭೂಮಿ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ ನವಭಾರತ ನಿರ್ಮಾಣಕ್ಕೆ ನಮಗೆ ಜನಾದೇಶ ಸಿಕ್ಕಿದೆ. ಸಂವಿಧಾನಬದ್ಧರಾಗಿ ಕಾರ್ಯ ನಿರ್ವಹಿಸಬೇಕಿದೆ. ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಕಳೆದ ಅಧಿವೇಶನ ಕೆಲವು ಇತಿಹಾಸಕ್ಕೆ ಕಾರಣವಾಗಿದೆ. ಮುಸ್ಲೀಂ ಮಹಿಳೆಯರಿಗೆ ತ್ರಿವಳಿ ತಲಾಖ್ ರದ್ದು, ಚಿಟ್ ಫಂಡ್ ವಂಚನೆ ತಪ್ಪಿಸಲು ಕಾಯ್ದೆ. ಸಿಎಎ ಐತಿಹಾಸಿಕ ಕಾಯ್ದ ಜಾರಿ ಐತಿಹಾಸಿಕ ನಿರ್ಧಾರಗಳಾಗಿವೆ. ಉದ್ಯಮ ಸರಳೀಕರಣ ರ್ಯಾಂಕ್ ನಲ್ಲಿ ಏರಿಕೆಯಾಗಿದೆ ಎಂದು ನುಡಿದರು.
ಜಮ್ಮುಕಾಶ್ಮೀರ ದೇಶದ ಅವಿಭಾಜ್ಯ ಅಂಗ. ಅಲ್ಲಿನ ಅಭಿವೃದ್ದಿ ಸರ್ಕಾರದ ಗುರಿಯಾಗಿದೆ. ಜಮ್ಮುಕಾಶ್ಮೀರ ಜನತೆಗೆ ಸಮಾನ ಅಧಿಕಾರ ನೀಡುವುದು ನಮ್ಮ ಉದ್ದೇಶ. ಜಮ್ಮುಕಾಶ್ಮೀರದ ಜನತೆಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗುತ್ತದೆ. ಲಡಾಕ್ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು. .
ಆಯುಷ್ಮಾನ್ ಆರೋಗ್ಯ ಉಜ್ವಲ ಯೋಜನೆ ಜಾರಿಯಿಂದ ಕೋಟ್ಯಾಂತರ ಜನರಿಗೆ ಅನಕೂಲವಾಗಿದೆ. ಸರ್ಕಾರದ ನೀತಿಯಿಂದ ಎಲ್ಲರಿಗೂ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು
ಸಿಎಎ ಕುರಿತು ಭಾಷಣದಲ್ಲಿ ಉಲ್ಲೇಖಿಸಿದ ರಾಷ್ಟ್ರಪತಿ ರಮನಾಥ್ ಕೋವಿಂದ್ , ಪೌರತ್ವ ಕಾಯ್ದೆ ಜಾರಿ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತದೆ. ಈ ಮೂಲಕ ಗಾಂಧೀಜಿ ಕನಸು ನನಸ್ಸು ಮಾಡಿದ್ದೇವೆ ಎಂದರು. ಈ ವೇಳೆ ಇದಕ್ಕೆ ವಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ವೇಳೆ ಗದ್ದಲ ಗಲಾಟೆ ನಡೆಯಿತು.
Key words: Enforcement -Citizenship Act-development – Jammu and Kashmir-President -Ramanath Kovind