ಬೆಂಗಳೂರು,ಮಾರ್ಚ್,30,2021(www.justkannada.in): ದೇಶದಲ್ಲಿ ಮೊತ್ತಮೊದಲಿಗೆ ಕರ್ನಾಟಕವು ಸಂಶೋಧನೆ ಮತ್ತು ಅಭಿವೃದ್ಧಿಗೆ ಶಕ್ತಿ ತುಂಬುವ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ (ER&D Policy) ಯನ್ನು ಪ್ರಕಟಿಸಿದ್ದು, ಇದರಿಂದ ಅಮೆರಿಕ ಕಂಪನಿಗಳ ಹೂಡಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.
ಕೇರಳದಲ್ಲಿನ ಚುನಾವಣಾ ಪ್ರಚಾರದ ನಡುವೆಯೇ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆ ಹಮ್ಮಿಕೊಂಡಿದ್ದ ವರ್ಚುವಲ್ ಸಭೆಯಲ್ಲಿ ತಿರುವನಂತಪುರದಿಂದಲೇ ಪಾಲ್ಗೊಂಡು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್; “ಈ ನೀತಿಯು ಕೈಗಾರಿಕಾಭಿವೃದ್ಧಿಗೆ ಹೆಚ್ಚು ಪೂರಕವಾಗಲಿದೆ ಹಾಗೂ ಅತ್ಯುತ್ತಮ ಮಾನವ ಸಂಪನ್ಮೂಲ ಸೃಷ್ಟಿಗೂ ಇದು ಸಹಾಯಕವಾಗುತ್ತದೆ” ಎಂದರು.
ಉತ್ಕೃಷ್ಟ ಮಾನವ ಸಂಪನ್ಮೂಲ
ಕೈಗಾರಿಕೆ ಮತ್ತು ಹೂಡಿಕೆಗೆ ಪೂರಕವಾದ ರಾಜ್ಯ ಕರ್ನಾಟಕ. ಹೊಸ ಉದ್ಯಮಗಳನ್ನು ಸ್ಥಾಪಿಸಲು ಸೂಕ್ತವಾದ ತಾಣ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದ ಅವರು; ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ IISc), ಭಾರತೀಯ ತಾಂತ್ರಿಕ ಸಂಸ್ಥೆ (IIT) ಹಾಗೂ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT) ಯಂಥ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಉತ್ಕೃಷ್ಟ ಮಾನವ ಸಂಪನ್ಮೂಲಕ್ಕೂ ರಾಜ್ಯದಲ್ಲಿ ಕೊರತೆ ಇಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ನುಡಿದರು.
ಇನ್ನು ಆವಿಷ್ಕಾರದಲ್ಲೂ ಕರ್ನಾಟಕ ನಂಬರ್ 1 ಸ್ಥಾನದಲ್ಲೇ ಇದೆ. ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ರಾಜ್ಯವು 2019, 2020 ಕ್ರಮವಾಗಿ ಮೊದಲ ಸ್ಥಾನದಲ್ಲೇ ಇದೆ. ಅದೇ ರೀತಿ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ನಿರ್ವಹಣೆ (ESDM), ಅನಿಮೇಷನ್, ವಿಷ್ಯುಯೆಲ್ ಎಫೆಕ್ಟ್ಸ್, ಗೇಮ್ಸ್ ಮತ್ತು ಕಾಮಿಕ್ಸ್ (AVGC) ಕ್ಷೇತ್ರದಲ್ಲೂ ರಾಜ್ಯ ದಾಪುಗಾಲಿಡುತ್ತಿದೆ ಎಂಬ ಅಂಶವನ್ನು ಡಿಸಿಎಂ ಅಶ್ವಥ್ ನಾರಾಯಣ್ ಒತ್ತಿ ಹೇಳಿದರು.
ಕರ್ನಾಟಕ ಹೂಡಿಕೆಗೆ ಸೂಕ್ತ ತಾಣ….
ಕೋವಿಡ್ ನಂತರದ ದಿನಗಳಲ್ಲಿ ಕೈಗಾರಿಕೆ, ಹೂಡಿಕೆ, ಆವಿಷ್ಕಾರ ಮುಂತಾದ ಕ್ಷೇತ್ರಗಳಲ್ಲಿ ಪುಟಿದೆದ್ದಿರುವ ಭಾರತವು, ಇಡೀ ಜಗತ್ತಿನಲ್ಲಿಯೇ ಸಹಜಸ್ಥಿತಿಗೆ ಮರಳಿದ ಮೊದಲ ದೇಶವಾಗಿದೆ. ಹಾಗೆಯೇ ಕರ್ನಾಟಕವು ಹೂಡಿಕೆಗೆ ಅತ್ಯಂತ ಸೂಕ್ತ ತಾಣ. ಕೋವಿಡ್ಡೋತ್ತರ ಕಾಲದಲ್ಲಿ ಭಾರತ ಮತ್ತು ಅಮೆರಿಕಕ್ಕೆ ವಿಪುಲ ಅವಕಾಶಗಳಿದ್ದು, ಅವೆಲ್ಲವನ್ನೂ ಸದುಪಯೋಗ ಮಾಡಿಕೊಳ್ಳೋಣ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಅನೇಕ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ದೇಶಗಳು ಜಾಗತಿಕ ಶಕ್ತಿಗಳಾಗಿ ಹೊರಹೊಮ್ಮಿವೆ. ರಕ್ಷಣೆ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ, ಮಾನವ ಸಂಪನ್ಮೂಲ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಕಾರಣಕ್ಕೆ 2019ನೇ ಸಾಲಿನಲ್ಲಿ ಎರಡೂ ದೇಶಗಳ ನಡುವೆ ಸರಕು ಮತ್ತು ಸೇವೆಗಳಲ್ಲಿ ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರವು 149 ಬಿಲಿಯನ್ ಮೀರಿದೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.
ಇದಕ್ಕೆ ಪೂರಕವಾಗಿ ಹೇಳುವುದಾದರೆ, ಭಾರತ-ಅಮೆರಿಕ ಪಾಲುದಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ರಾಜ್ಯವು ಅನನ್ಯ ಕೊಡುಗೆ ನೀಡಿದೆ. 220 ಬಿಲಿಯನ್‌ನಷ್ಟು ಒಟ್ಟು ದೇಶಯ ಉತ್ಪನ್ನ (ಜಿಎಸ್‌ಡಿಪಿ) ಹೊಂದಿರುವ ಕರ್ನಾಟಕವು ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದು. ಮಾಹಿತಿ-ಜೈವಿಕ ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಈ ವರ್ಚುಯಲ್ ಸಭೆಯಲ್ಲಿ ಭಾರತದಲ್ಲಿರುವ ಸ್ಯಾನ್‌ಪ್ರಾನ್ಸಿಸ್ಕೋ ರಾಜ್ಯದ ಕಾನ್ಸುಲ್ ಜನರಲ್ ಡಾ.ಟಿ.ವಿ.ನಾಗೇಂದ್ರ ಪ್ರಸಾದ್, ಉಪ ಕಾನ್ಸುಲ್ ಜನರಲ್ ರಾಜೇಶ್ ನಾಯಕ್, ಅಮೆರಿಕ-ಭಾರತ ಕಾರ್ಯತಂತ್ರ ವೇದಿಕೆಯ ಅಧ್ಯಕ್ಷ ಜಾನ್ ಚಾಂಬರ್ಸ್, ಇದೇ ವೇದಿಕೆಯ ವೆಸ್ಟ್ ಕೋಸ್ಟ್ ವಿಭಾಗದ ಮುಖ್ಯಸ್ಥರಾದ ದೀಪ್ತಿ ದೇಸಾಯಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಪಾಲ್ಗೊಂಡಿದ್ದರು.
ENGLISH SUMMARY….
U.S. enterprises should make use of the state ecosystem- Dr.C.N.Ashwatha Narayana
Bengaluru: Deputy Chief Minister of Karnataka, Dr. C.N.Ashwatha Narayana, who also holds the Electronics, IT/Bt portfolio called on the American businessmen and industry players to open up their activities in the state of Karnataka, by availing the supportive measures which exist in the state.
Narayana, who is on the Kerala tour as Co-Election in charge, participated virtually in the “Destination India: Karnataka showcase event organized by the US – India Strategic Partnership Forum on Tuesday and addressed during the occasion.
In 2019, overall U.S.-India bilateral trade in goods and services reached
$149 billion. The strong people-to-people ties between our countries, reflected in a four-million-strong Indian American diaspora, are a tremendous source of strength for
the partnership, he pointed out.
The DyCM Narayana said, “Government of Karnataka is providing attractive incentives to the industries and has rolled out sector-specific policies for Information Technology, Biotechnology, Electronics System Design & Manufacturing (ESDM) and Animation, Visual Effects, Gaming and Comics (AVGC). Further, the state government has recently formulated a policy specifically to promote and incentivize Research & Development across the state– The Engineering Research & Development Policy with the objective of making the state as ‘Destination of Choice’ for ER&D in the country.”
Dr. Ramana Reddy, Additional Chief Secretary, explained the details of the incentive, offered under State Policies and said, that the government was undertaking initiatives in line with achieving the vision set by the Prime Minister to make India reach the 5 trillion dollar economy,
Dr. T.V. Nagendra Prasad, Consul General of India San Francisco, Jay Vijayan, CEO, Tekion Corp, Rajesh Naik, Deputy Consul General, CGI San Francisco, John Chambers, Chairman Division, US-India Strategic Partnership Forum, Dipty Desai, Head, West Coast Division, US-India Strategic Partnership Forum were present.
Key words: Engineering- research-development- policy- complement- American- companies-investment-DCM Ashwath Narayan.