ಬೆಂಗಳೂರು, ಜೂನ್ 05, 2021 (www.justkannada.in): ಜನಾಂಗೀಯ ನಿಂದನೆ ಹಾಗೂ ಸೆಕ್ಸಿ ಟ್ವೀಟ್ ನಿಂದಾಗಿ ಇಂಗ್ಲೆಂಡ್ ವೇಗಿ ಓಲೀ ರಾಬಿನ್ಸನ್ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಿಂದ ಅವರನ್ನು ಕೈಬಿಡುವ ಎಲ್ಲ ಸಾಧ್ಯತೆ ಇದೆ ಎನ್ನಲಾಗಿದೆ.
ಓಲೀ ರಾಬಿನ್ಸನ್ ಲಾರ್ಡ್ಸ್ ಪಂದ್ಯದಲ್ಲಿ “ಟೆಸ್ಟ್ ಕ್ಯಾಪ್’ ಧರಿಸಿದ ಸಂಭ್ರಮದಲ್ಲಿದ್ದರು. 4 ವಿಕೆಟ್ ಉರುಳಿಸಿ ಮೊದಲ ಸರದಿಯ ಯಶಸ್ವಿ ಬೌಲರ್ ಆಗಿಯೂ ಗುರುತಿಸಿಕೊಂಡಿದ್ದರು.
ಇದರಿಂದ 28 ವರ್ಷದ ಓಲೀ ರಾಬಿನ್ಸನ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಒಂದೇ ಪಂದ್ಯಕ್ಕೆ ಸೀಮಿತಗೊಳ್ಳುವ ಎಲ್ಲ ಸಾಧ್ಯತೆ ಇದೆ.