ಮೈಸೂರಿನಲ್ಲಿ ಆಂಗ್ಲ ಭಾಷಾ ಬೋಧನೆ ಶಿಕ್ಷಕರಿಗೆ ಇಂಗ್ಲಿಷ್ ಎಂಪವರ್ ಮೆಂಟ್ ಪ್ರೋಗ್ರಾಮ್

ಮೈಸೂರು,ಫೆಬ್ರವರಿ, 12,2025 (www.justkannada.in): ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ  ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆಂಗ್ಲ ಭಾಷಾ ಬೋಧನೆ ಮಾಡುವ ಶಿಕ್ಷಕರಿಗೆ ಇಂಗ್ಲಿಷ್ ಎಂಪವರ್ ಮೆಂಟ್ ಪ್ರೋಗ್ರಾಮ್ ಕಾರ್ಯಕ್ರಮದ ಅಂತಿಮ ಅಂತದ ಇಂಗ್ಲಿಷ್ ಫೆಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ವಿವೇಕಾನಂದರವರು ಉದ್ಘಾಟಿಸಿ ಮಾತನಾಡಿದರು. ಮೈಸೂರು ಉತ್ತರ ದಕ್ಷಿಣ ಗ್ರಾಮಾಂತರ ವಲಯಗಳಿಂದ 650 ಜನ ಆಂಗ್ಲಭಾಷಾ ಬೋಧಿಸುವ ಶಿಕ್ಷಕರಿಗೆ ಆಂಗ್ಲ ಭಾಷಾ ಟಿಎಲ್ಎಂ ಎಕ್ಸಿಬಿಷನ್ ಅನ್ನ ಮಾಡಲಾಗಿತ್ತು. ಸುಮಾರು 150ಕ್ಕೂ ಹೆಚ್ಚು ಇಂಗ್ಲಿಷ್ ಟಿಎಲ್ಎಂಗಳನ್ನು ಪ್ರದರ್ಶಿಸಲಾಗಿತ್ತು.

ಕಾರ್ಯಕ್ರಮಗಳಲ್ಲಿ ಉತ್ತಮ ಆಂಗ್ಲ ಭಾಷೆ ಭೋದಿಸುವ ಶಿಕ್ಷಕರು ಹಾಗೂ ಇಂಗ್ಲೀಷ್ ಲಾಬ್ ಗಳನ್ನ ನಿರ್ವಹಿಸಿರುವ ಶಿಕ್ಷಕರು ಉತ್ತಮವಾಗಿ ಶಾಲೆಯನ್ನ ನಿರ್ವಹಣೆ ಮಾಡಿರುವ ಶಿಕ್ಷಕರಿಗೆ ಅಭಿನಂದಿಸಲಾಯಿತು.

ಮೈಸೂರು ದಕ್ಷಿಣ ವಲಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ  ಶಾಲೆಗಳಲ್ಲಿ 5ನೇ ತರಗತಿಯಿಂದ 9ನೇ ತರಗತಿಗೆ ವ್ಯಾಸಂಗ ಮಾಡುತ್ತಿರುವ 7853 ವಿದ್ಯಾರ್ಥಿಗಳಲ್ಲಿ ತರಗತಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕನಿಷ್ಠ ಕಲಿಯಲೇಬೇಕಾದ ಆಂಗ್ಲ ಭಾಷಾ ರೀಡಿಂಗ್ ಅಂಡ್ ರೈಟಿಂಗ್ ಕೌಶಲಗಳನ್ನು ಬೆಳೆಸುವ ಮತ್ತು ಉತ್ತಮಪಡಿಸುವ ಸಲುವಾಗಿ 100 ದಿನಗಳ ಕಾರ್ಯಕ್ರಮವನ್ನು ಶಾಲಾ ಹಂತದಲ್ಲಿ ಏರ್ಪಡಿಸಲಾಗಿತ್ತು..

ಈ ನೂರು ದಿನಗಳಲ್ಲಿ ಆಂಗ್ಲ ಭಾಷಾ ಬೋಧಿಸುವ ಶಿಕ್ಷಕರು ಕಡ್ಡಾಯವಾಗಿ ಐದು ಆರು ಏಳು ತರಗತಿಗಳಲ್ಲಿ ಕನಿಷ್ಠ ಆಂಗ್ಲಭಾಷೆ ಬರವಣಿಗೆ ಹಾಗೂ ಓದುವ ಹವ್ಯಾಸವನ್ನು ಬೆಳೆಸಲು ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು. 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೀಡಿಂಗ್ ರೈಟಿಂಗ್ ಅಂಡ್ ಸ್ಪೀಕಿಂಗ್ ಕೌಶಲ್ಯಗಳನ್ನು ಉತ್ತಮಪಡಿಸಲು ತರಗತಿ ಹಂತದಲ್ಲಿ ಶಾಲಾ ಹಂತದಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ ನೂರು ದಿನಗಳಲ್ಲಿ 30 ದಿನಗಳಿಗೆ ಒಮ್ಮೆ ಒಂದೊಂದು ಅಚೇಸ್ಮೆಂಟುಗಳನ್ನು ಪ್ರತಿ ವಿದ್ಯಾರ್ಥಿಯ ಆಂಗ್ಲ ಭಾಷೆ ಕಲಿಕಾ ಪ್ರಗತಿಯನ್ನು ಪರಿಶೀಲಿಸಲು ಕಿರುಪರೀಕ್ಷೆಗಳನ್ನು ನಡೆಸಲಾಯಿತು.

ಐದರಿಂದ ಒಂಬತ್ತನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೂ ರೀಡಿಂಗ್ ರೈಟಿಂಗ್ ಅಂಡ್ ಸ್ಪೀಕಿಂಗ್ ಕಾಂಪಿಟೇಶನ್ ಗಳನ್ನು ಶಾಲಾ ಹಂತ ಕ್ಲಸ್ಟರ್ ಹಂತ ಮತ್ತು ಬ್ಲಾಕ್ ಹಂತಗಳಲ್ಲಿ ಏರ್ಪಡಿಸಲಾಗಿತ್ತು. ಬ್ಲಾಕ್ ಹಂತದಲ್ಲಿ ರೀಡಿಂಗ್ ರೈಟಿಂಗ ಸ್ಪೀಕಿಂಗ್ ನಲ್ಲಿ ವಿಜೇತರಾದಂತ ಮಕ್ಕಳಿಗೆ ಇಂದು ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ನೀಡಲಾಯಿತು. ಬ್ಲಾಕ್ ಅಂತಕ್ಕೆ 16 ವಿದ್ಯಾರ್ಥಿಗಳು ವಿಜೇತರಾಗಿದ್ದರು.

150 ಜನ ಆಂಗ್ಲ ಭಾಷಾ ಬೋಧಿಸುವ ಶಿಕ್ಷಕರು ಉತ್ತಮವಾದ ಆಂಗ್ಲ ಭಾಷ ಬೋಧನೆಯ ಟಿಎಲ್ಎಂಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಸಹ ನಿರ್ದೇಶಕ ಡಾ. ಪಾಂಡುರಂಗ. ಉಪ ನಿರ್ದೇಶಕ ಜವರೇಗೌಡ. ಮೈಸೂರು ಉತ್ತರ ವಲಯದ ಕ್ಷೇತ್ರಕ್ಕಣ್ಣಾಧಿಕಾರಿ ರೇವಣ್ಣ,  ಮೈಸೂರು ಗ್ರಾಮಾಂತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್,  ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ,  ಶಿಕ್ಷಣಾಧಿಕಾರಿ ಅನಂತ ರಾಜ್. ಡಿ ವೈ ಪಿ ಸಿ ಶೋಭಾ, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಿಎನ್ ರಾಜು ಉಪಸ್ಥಿತರಿದ್ದರು.  

Key words: English Empowerment, Program, English Language Teachers,Mysore