ಮೈಸೂರು,ಜುಲೈ,10,2021(www.justkannada.in): ಮೈಸೂರು ನಗರದಲ್ಲಿ ವ್ಯವಸ್ಥಿತ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಅಜೀಜ್ ಸೇಠ್ ಡಬಲ್ ರೋಡ್ ನಲ್ಲಿರುವ ಎನ್ ಆರ್ ಸೆಂಟ್ರಲ್ ಬೀಡಿ ವರ್ಕರ್ ಹಾಸ್ಪಿಟಲ್ ನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಮತ್ತು ಅಜೀಜ್ ಸೇಠ್ ಸಾಬ್ ವೆಲ್ಫೇರ್ ಟ್ರಸ್ಟ್ ,ಕೇರ್ ಸೋಷಿಯಲ್ ಫೌಂಡೇಷನ್ ಟ್ರಸ್ಟ್ ,ಉಮೇದ್ ಟ್ರಸ್ಟ್ ,ಮೈಸೂರು ಡಿಸ್ಟ್ರಿಕ್ಟ್ ರಿಲೀಫ್ ಕಮಿಟಿ , ಉಮ್ಮತ್ ಸೋಷಿಯಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಶಾಸಕ ತನ್ವೀರ್ ಸೇಠ್ ಮಾತನಾಡಿದರು.
ಮೈಸೂರು ಅತಿವೇಗವಾಗಿ ಬೆಳೆಯುತ್ತಿರುವ ನಗರ. ಖಾಸಗಿ ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಗಳು ಸ್ಥಾಪನೆ ಆಗಿರುವಂತದ್ದು. ಕೇಂದ್ರಸರ್ಕಾರದ ಹೊಸ ನಿಯಮಾವಳಿ ಪ್ರಕಾರ ಕೆ.ಆರ್.ಆಸ್ಪತ್ರೆಯಲ್ಲಿರುವ ಬ್ಲಡ್ ಬ್ಯಾಂಕ್ ಗೆ ಇನ್ನಷ್ಟು ಉನ್ನತೀಕರಣವಾಗಬೇಕಾದ ಅವಶ್ಯಕತೆ ಇದೆ. ಕಾರಣ ಬ್ಲಡ್ ಪ್ಲೇಟ್ಸ್ ಇರಬಹುದು, ಪ್ಲಾಸ್ಮಾ ಇರಬಹುದು, ಬ್ಲಡ್ ಇರಬಹುದು ಇವುಗಳನ್ನು ಬೇರೆ ಬೇರೆ ಮಾಡುವ ಮತ್ತು ಹೊಸ ನೀತಿಯನ್ವಯ ಸ್ಪಷ್ಟವಾಗಿ ಮಾರ್ಗದರ್ಶನ ಮತ್ತು ಅದಕ್ಕೆ ಬೇಕಾಗಿರುವ ತಂತ್ರಾಂಶವನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಅಪಘಾತಗಳು, ಬೇರೆ ಬೇರೆ ಚಿಕಿತ್ಸೆಗಳಾದ ಸಂದರ್ಭದಲ್ಲಿ ರಕ್ತದ ಬೇಡಿಕೆ ಹೆಚ್ಚುತ್ತಿದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಸ್ವಯಂ ಸೇವಾ ಸಂಸ್ಥೆಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿವೆ. ಐದು ಸಂಘಟನೆಗಳು ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮೈಸೂರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಲಯನ್ಸ್ ಮತ್ತು ಜೀವಧಾರ. ಇವರ ಜೊತೆ ಸಂಯೋಜನೆ ಮಾಡಿ ಇಂದು ರಕ್ತದಾನ ಶಿಬಿರ ಹಮ್ಮಿಕೊಂಡಿವೆ. ಇದರಲ್ಲಿ ಒಂದು ಯುವಕರಲ್ಲಿ ಪ್ರೇರಣೆ ತುಂಬುವುದು, ಎರಡನೆಯದು ಯಾವುದೇ ಸಂಸ್ಥೆ ಮಾಡಿದರೂ ಕೂಡ ಸರ್ಕಾರದ ನಿಯಮಾವಳಿ ಪ್ರಕಾರ ಶೇ.25ರಷ್ಟು ಸರ್ಕಾರಿ ಸಂಸ್ಥೆಗೆ ಉಚಿತವಾಗಿ ಮೊದಲು ನೀಡಬೇಕು. ಇದಾದ ಮೇಲೆ ಒಂದು ಒಪ್ಪಂದ ಜೀವಧಾರಾ ಜೊತೆ ಆಗಿದ್ದು, ನಾವು ಕೊಡುವಂತ ಎಲ್ಲ ರಕ್ತ ಯಾವುದೇ ಸಂದರ್ಭದಲ್ಲಿ ಕುಟುಂಬದವರಿಗೆ, ಸ್ನೇಹಬಳಗದಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಅವರಿಗೆ ನೀಡುವ ಗುರುತಿನ ಚೀಟಿ, ಸರ್ತಿಫಿಕೇಟ್ ನೀಡಿದಾಗ ಜೀವ ಉಳಿಸಲು ಮುಂದಾಗುವಂತದ್ದಾಗಿರುತ್ತದೆ ಎಂದರು.
ದೀರ್ಘಕಾಲ ನಡೆಸುವ ಆಲೋಚನೆ ಇಟ್ಟುಕೊಂಡಿದ್ದೇವೆ. ಮೈಸೂರು ನಗರದಲ್ಲಿ ವ್ಯವಸ್ಥಿತ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. 200ರಿಂದ 250 ಯೂನಿಟ್ ರಕ್ತದಾನದ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನನ್ನ ಮಗಳು ಪರ್ವೀನ್ ಕೂಡ ಬ್ಲಡ್ ನೀಡಿದ್ದಾಳೆ. ಎಲ್ಲ ಸಂಘಟನೆಗಳನ್ನು ಸಂಘಟಿಸಿ ಮಾಡಿದ್ದು, ಕೇವಲ ಆಯೋಜನೆ ಮಾಡುವುದು ಮಾಡಿದ್ದು ಅಷ್ಟೇ ಅಲ್ಲ, ಅವರು ರಕ್ತದಾನ ಮಾಡುವ ಮೂಲಕ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ ಇದು ಗೌರವ ತರುವಂತಹ ಕೆಲಸ ಎಂದು ಶಾಸಕ ತನ್ವೀರ್ ಸೇಠ್ ಶ್ಲಾಘಿಸಿದರು.
ನಂತರ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್, ಶಾಸಕರಾದ ತನ್ವೀರ್ ಸೇಠ್ , ರಕ್ತದಾನ ಮಾಡುವುದರಲ್ಲಿ ಮಾದರಿ ಜನಪ್ರತಿನಿಧಿಗಳು. ಮುಂದೆ ನಿಂತಿ ಸ್ವಯಂಪ್ರೇರಿತವಾಗಿ ಕ್ಷೇತ್ರದ ಜನತೆಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.
ಮೈಸೂರಿನಲ್ಲಿ ರಕ್ತದ ಅಭಾವ ತಲೆದೋರದಂತೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ,
ರಕ್ತ ದಾನವು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ತಂತ್ರಜ್ಞಾನ ಬೆಳೆದಂತೆ ವೈಜ್ಞಾನಿಕವಾಗಿ ಪರೀಕ್ಷಿಸಿ ಸುರಕ್ಷಿತ ರಕ್ತವನ್ನು ನೀಡಲಾಗುತ್ತಿದೆ. ಆರೋಗ್ಯವಂತ ವ್ಯಕ್ತಿಯೊಬ್ಬರು ತಮ್ಮ ಜೀವಮಾನದಲ್ಲಿ 18 ರಿಂದ 65 ವರ್ಷದೊಳಗೆ 150ಕ್ಕೂ ಹೆಚ್ಚಿನ ಸಲ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ದೇಹಕ್ಕೆ ಅನಗತ್ಯವಾದ ಕೊಲೆಸ್ಟ್ರಾಲ್, ಯುರಿಯ, ಯೂರಿಕ್ ಆಮ್ಲ ಕಡಿಮೆಯಾಗುತ್ತದೆ, ಹಾಗೂ ಹೃದಯಾಘಾತವನ್ನು ತಡೆಯುತ್ತದೆ ಹಾಗಾಗಿ ದಯಮಾಡಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪುಣ್ಯ ಪುರುಷರ ಜಯಂತಿ ಹಾಗು ಇತರ ವಿಶೇಷ ದಿನಗಳಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಬಡರೋಗಿಗಳಿಗೆ ಸ್ಪಂದಿಸಲು ಮುಂದಾಗಬೇಕು’ ಎಂದರು
ಶಾಸಕರಾದ ತನ್ವೀರ್ ಸೇಠ್ ,ಮೈಸೂರು ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿ ಡಾ. ಕೆ ಎಚ್ ಪ್ರಸಾದ್ ,ಹಂಗಾಮಿ ಮೇಯರ್ ಅನ್ವರ್ ಬೇಗ್ ,ರಕ್ತನಿಧಿ ನೋಡಲ್ ಆಫೀಸರ್ ಡಾ. ಮಹಮ್ಮದ್ ಸಿರಾಜ್ ,ಡಾ. ದಾನಿಶ್ ,ತನ್ವೀರ್ ಸೇಠ್ ಪುತ್ರಿ ಪರ್ವಿನ್ ಸೇಠ್ ,ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕನಾದ ಗಿರೀಶ್ ,ಸೆಂಟ್ರಲ್ ನೋಡಲ್ ಆಫೀಸರ್ ಸೈಯದ್ ಇನ್ನಿತರರು ಇದ್ದರು.
Key words: Establishment – Blood Bank – Mysore-MLA Tanveer Sait