ಜನರ ಸಮಸ್ಯೆ ಪರಿಹಾರಕ್ಕಾಗಿ ಕಾಲ್ ಸೆಂಟರ್ ಸ್ಥಾಪನೆ –  ಸಚಿವ  ಡಾ. ನಾರಾಯಣಗೌಡ…

ಮಂಡ್ಯ .ಮಾ,20,2021(www.justkannada.in): ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಮೂಲಕ ಬೊಪ್ಪೇಗೌಡನಪುರ ಗ್ರಾಮದ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅವರು ಹೇಳಿದರು.jk

ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಪ್ರಯುಕ್ತ  ಮಳವಳ್ಳಿಯ ಬಿಜಿ ಪುರದಲ್ಲಿ  ಆಯೋಜಿಸಿದ್ದ ಗ್ರಾಮ ವಾಸ್ತವ್ಯದಲ್ಲಿ ಮಾತನಾಡಿದ ಸಚಿವ ನಾರಾಯಣ ಗೌಡ, ಮಂಡ್ಯ ಜಿಲ್ಲೆಯ ಜನರ ಸಮಸ್ಯೆ ಪರಿಹಾರಕ್ಕಾಗಿ ಕಾಲ್ ಸೆಂಟರ್ ಆರಂಭಿಸುತ್ತೇವೆ. ಅಲ್ಲದೆ ವಿಧವಾವೇತನ, ವೃದ್ಧಾಪ್ಯ ವೇತನ, ಇನ್ನಿತರ ಯೋಜನೆಗಳನ್ನು ಅಧಿಕಾರಿಗಳು ಗ್ರಾಮದ ಜನರಿಗೆ ತಲುಪಿಸಿ ಎಂದರು.

ನಮ್ಮ ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂದೆ ತರುವ ಕೆಲಸವನ್ನು ಮಾಡುತ್ತೇನೆ. ಜಿಲ್ಲೆಯಲ್ಲಿ ಇನ್ನು ಮುಂದೆ ಅಗ್ರೀಟೂರಿಸಂನ್ನು  ಪ್ರಾರಂಭಿಸಿ ಕೃಷಿಗೆ ಮತ್ತಷ್ಟು ಆದ್ಯತೆ ನೀಡಲಾಗುವುದು. ಏತನೀರಾವರಿಯನ್ನು ಪ್ರಾರಂಭಿಸುತ್ತೇವೆ. ಸರ್ಕಾರ ನಿಮ್ಮ ಮನೆಬಾಗಿಲಿಗೆ ಬಂದಿದ್ದು, ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ವಿದಾನ ಪರಿಷತ್ ಶಾಸಕರಾದ ಅಪ್ಪಾಜೀಗೌಡ ಮಾತನಾಡಿ, ಆರ್.ಟಿ.ಸಿ  ಖಾತೆ ಬದಲಾವಣೆ, ವಿಧವಾವೇತನ, ಮಾಸಾಶನಗಳನ್ನು ಸಮರ್ಪಕವಾಗಿ ಒದಗಿಸಿ ಎಂದರು. ಈ ದಿನ ಅಧಿಕಾರಿಗಳೇ ಗ್ರಾಮಕ್ಕೆ ಬಂದಿರುವುದು ಸಂತಸದ ಸಂಗತಿ. ಈ ದಿನ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿವರ್ಗ ಸಹಕರಿಸುತ್ತದೆ ಎಂದು ಹೇಳಿದರು.

ಶಾಸಕರಾದ ಅನ್ನದಾನಿ ಮಾತನಾಡಿ ಸರ್ಕಾರದ ನಡೆ- ಗ್ರಾಮದೆಡೆಯ ರೂವಾರಿ ಕಂದಾಯ ಸಚಿವ  ಆರ್ ಅಶೋಕ್ ರವರಿಗೆ ಅಭಿನಂದನೆ ಸಲ್ಲಿಸಿದರು. ಸರ್ಕಾರದ ನಡೆಯ ಈ ಕಾರ್ಯಕ್ರಮ ತುಂಬಾ ಯಶಸ್ಸಿಯಾಗಲಿ ಎಂದು ಹಾರೈಸಿದರು.

ಬೊಪ್ಪೇಗೌಡನಪುರ ಐತಿಹಾಸಿಕ ಸ್ಥಳ ಈ ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸುತ್ತಿರುವುದು ಸಂತಸ ತಂದಿದೆ. ಬೊಪ್ಪೇಗೌಡನಪುರವನ್ನು ಅಭಿವೃದ್ಧಿ ಪಥದತ್ತ ಸಾಗಲು ಸಹಕರಿಸಿ ಎಂದರು.Establishment -call center - people -problem –solving-Minister - Narayana Gowda.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಅಶ್ವಥಿ, ಉಪವಿಭಾಗಾಧಿಕಾರಿಗಳಾದ ಶಿವಾನಂದಮೂರ್ತಿ, ತಹಶೀಲ್ದಾರ್ ವಿಜಯ್ ಕುಮಾರ್, ಗ್ರಾಮಸ್ಥರು,ಜನಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ENGLISH SUMMARY….

Call Centre to be established to solve problems of people – Minister Dr. Narayanagowda
Mandya, Mar. 20, 2021 (www.justkannada.in): ‘All the problems of the people of Boppegowdanapura Village will be solved by the ‘Deputy Commissioner’s walk towards Village’ program, opined Dr. Narayanagwoda, Mandya District In-charge, and Youth Empowerment, Sports and Program, and Statistics Minister.
Speaking during his village stay program at B.G. Pura in Malavalli, as part of the ‘Deputy Commissioners walk towards the village,’ program the Minister Narayanagowda informed that a Call Centre would be opened to solve the problems of the people of Mandya District. On the occasion, he also called upon the officers concerned to take necessary measures to reach out the various government benefits like widow pension, old age pension, etc. to the beneficiaries.Establishment -call center - people -problem –solving-Minister - Narayana Gowda.
“We will make all efforts for improvement of sports in the District. Preference will be given for agri-tourism and more priority will be given to agriculture in the District. We have plans to start lift irrigation. The government has come to your doorsteps and the officials will address all your problems and solve it,” he informed the villagers.
Deputy Commissioner Ashwathi, Assistant Commissioner Shivanandamurthy, Tahasildar Vijay Kumar, villagers, and elected representatives were present.
Keywords: Minister Narayanagwoda/ Mandya District/ Sports/ Call center to solve problems of people

Key words: Establishment -call center – people -problem –solving-Minister – Narayana Gowda.