ಮೈಸೂರು,ಸೆಪ್ಟಂಬರ್,10,2020(www.justkannada.in): ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಕಾನೂನು ಸೇವಾ ಕೇಂದ್ರ ಸ್ಥಾಪನೆ ಮಾಡಲಾಗಿದೆ.
ಮೈಸೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ಸ್ಥಾಪಿತವಾಗಿರುವ ಉಚಿತ ಕಾನೂನು ಸೇವಾ ಕೇಂದ್ರವನ್ನು ಟೇಪ್ ಕತ್ತಿರುವ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ ದೇವಮಾನೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ಉಪವಿಭಾಗಾಧಿಕಾರಿ ವೆಂಕಟರಾಜು, ತಹಸೀಲ್ದಾರ್ ರಕ್ಷಿತ್ ಇತರರು ಭಾಗಿಯಾಗಿದ್ದರು.
ಈ ಉಚಿತ ಕಾನೂನು ಸೇವಾಕೇಂದ್ರ ವಾರದಲ್ಲಿ ಎರಡು ದಿನ ಕಾರ್ಯನಿರ್ವಹಿಸುತ್ತದೆ. ಗುರುವಾರ ಮತ್ತು ಶುಕ್ರವಾರ ದಿನದಂದು ಈ ಕೇಂದ್ರ ಸಾರ್ವಜನಿಕ ಸೇವೆಗೆ ಲಭ್ಯವಿರಲಿದ್ದು, ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಬಡವರಿಗೆ, ಮಧ್ಯಮ ವರ್ಗದವರಿಗೆ ಕಾನೂನು ಸೇವೆ ಕಲ್ಪಿಸುವ ಉದ್ದೇಶ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ್ದಾಗಿದೆ.
Key words: Establishment -Free -Legal –Service-Center – Public – Mysore.