ನವದೆಹಲಿ,ಫೆ,1,2020(www.justkannada.in): ಇಂದು ಮಂಡನೆಯಾಗುತ್ತಿರುವ 2020-21ನೇ ಸಾಲಿನ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ ಮೀಸಲಿಡಲಾಗಿದೆ.
ಇಂದು ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 12 ರೋಗಗಳಿಗೆ ಮಿಷನ್ ಇಂದ್ರಧನುಷ್ ಯೋಜನೆ ಜಾರಿ ಮಾಡಲಾಗುತ್ತದೆ ಆಯುಷ್ಮಾನ್ ಭಾರತ ಯೋಜನೆಯಡಿ 112 ಜಿಲ್ಲೆಗಳಿಗೆ ಹೊಸ ಆಸ್ಪತ್ರೆ ನಿರ್ಮಾಣ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪಿಎಂ ಆರೋಗ್ಯ ಯೋಜನೆ ಮೂಲಕ 20 ಸಾವಿರ ಆಸ್ಪತ್ರೆಗೆಳಿಗೆ ನೆರವು ನೀಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಜನೌಷಧ ಮಳಿಗೆ ಸ್ಥಾಪನೆ. ಜಲಜೀವನ ಯೋಜನೆಗೆ 3.6 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸ್ವಚ್ಛ ಭಾರತ್ ಯೋಜನೆಗೆ 12,300 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದರು.
Key words: Establishment – Janushadha Shop – all districts-69,000 crore – health Field
Focus on water and sanitation: more hospitals in PPP mode, more Ayushmann hospitals, health infrastructure, hospitals in 112 districts, End TB by 2025, rs 12300 cr for Swachh Bharat mission