ಮೈಸೂರು, ಡಿಸೆಂಬರ್ 06, 2020 (www.justkannada.in): ಉದ್ಯಮಶೀಲತೆ ಹಾಗೂ ಹೊಸ ವ್ಯವಹಾರಿಕ ಅನ್ವೇಷಣಾ ಕೇಂದ್ರವನ್ನು ರಾಷ್ಟ್ರೀಯ ಶಿಕ್ಷಣ ನೀತಿ-2020ರಡಿ ಸೇರಿಸಲು ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಚೈತ್ರಾ ನಾರಾಯಣ್ ಯೋಜನೆ ರೂಪಿಸಿದ್ದಾರೆ.
ಈ ಸಂಬಂಧ ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಅವರನ್ನು ಬೆಂಗಲೂರಿನಲ್ಲಿ ಭೇಟಿ ಮಾಡಿದ ಡಾ.ಚೈತ್ರಾ ನಾರಾಯಣ್ ಪ್ರಸ್ತಾವನೆ ಸಲ್ಲಿಸಿದರು.
ಕೇಂದ್ರ ಸ್ಥಾಪನೆ ಉದ್ದೇಶ ಹಾಗೂ ಅದರ ರೂಪುರೇಷೆಗಳ ಕುರಿತ ಮಾಹಿತಿಯನ್ನು ನೀಡಿದರು. ಇದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಡಿಸಿಎಂ ಈ ಸಂಬಂಧ ಕ್ರಿಯಾ ಯೋಜನೆ ರೂಪಿಸಲು ಸರಕಾರದ ಉನ್ನತ ಶಿಕ್ಷಣ ಪರಿಷತ್ ಗೆ ಸೂಚಿಸಿದ್ದಾರೆ ಎಂದು ಚೈತ್ರಾ ನಾರಾಯಣ್ ತಿಳಿಸಿದ್ದಾರೆ.