ಮೈಸೂರು,ಮಾರ್ಚ್,20,2021(www.justkannada.in): ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆ ವೇಳೆ ಇಬ್ಬರ ಯುವಕರ ಮೇಲೆ ಎತ್ತಿನಗಾಡಿ ಹರಿದು ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನಲ್ಲಿ ನಿನ್ನೆ ನಡೆದಿದೆ.
ನರಸೀಪುರದ ಹೊರವಲಯದ ಮೈದಾನದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಈ ಅನಾಹುತ ಸಂಭವಿಸಿದ್ದು ಘಟನೆಯಲ್ಲಿ ಓರ್ವನ ಸ್ಥಿತಿ ತೀವ್ರ ಗಂಭೀರವಾಗಿದ್ದು ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದೆ. ಹೊಸಳ್ಳಿ ಗ್ರಾಮದ ಯುವಕ ರವಿ ಸ್ಥಿತಿ ಗಂಭೀರವಾಗಿದೆ. ಯುವಕ ರವಿ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎತ್ತಿನಗಾಡಿ ಓಟದ ಸ್ಪರ್ಧೆಯನ್ನ ವೀಕ್ಷಿಸುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಎತ್ತಿನಗಾಡಿ ಯುವಕರ ಗುಂಪಿನತ್ತ ನುಗ್ಗಿದೆ. ಈ ಸಮಯದಲ್ಲಿ ಎತ್ತಿನಗಾಡಿ ಯುವಕರ ಮೇಲೆ ಹರಿದು ಪಲ್ಟಿಯಾಗಿದೆ ಎನ್ನಲಾಗಿದೆ.
Key words: ettinagadi race-mysore- T.Narasipur-two –injured