ಹೊಸ ರೂಪದಲ್ಲಿ “ಇವಿ ಮಿತ್ರ”: ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಮಾಹಿತಿ ಲಭ್ಯ

ಬೆಂಗಳೂರು, ಸೆಪ್ಟಂಬರ್,9, 2024 (www.justkannada.in): ಇವಿ ಬಳಕೆದಾರರಿಗೆ  ಸುಗಮ ಚಾರ್ಜಿಂಗ್‌  ಸೌಲಭ್ಯ ಒದಗಿಸುತ್ತಿರುವ ಬೆಸ್ಕಾಂನ  ‘ಇವಿ ಮಿತ್ರ’ ಆ್ಯಪ್‌  ಈಗ ಹೊಸ ರೂಪ ಪಡೆದುಕೊಂಡಿದೆ.

ಆ್ಯಂಡ್ರಾಯ್ಡ್ ಮತ್ತು ಐಓಎಸ್‌ ಎರಡು ಮೊಬೈಲ್‌ ಅಪ್ಲಿಕೇಶನ್‌ ಗಳಲ್ಲಿ ಲಭ್ಯವಿರುವ ಹೊಸ ‘ಇವಿ ಮಿತ್ರ’ ಆ್ಯಪ್‌- ಬಳಕೆದಾರರ ಪ್ರೊಫೈಲ್‌ ನಿರ್ವಹಣೆ, ಚಾರ್ಚಿಂಗ್‌ ಸ್ಟೇಷನ್‌ ಗಳ ವೀಕ್ಷಣೆಯೊಂದಿಗೆ ಮಾಹಿತಿ, ಚಾರ್ಜಿಂಗ್‌ ಪ್ರಕ್ರಿಯೆ, ಬುಕ್ಕಿಂಗ್‌ ವಿವರ, ಚಾರ್ಚಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್‌ ಕಾಯ್ದಿರಿಸುವ ಸೌಲಭ್ಯ ಹೊಂದಿದೆ.

ಹಳೆ ‘ಇವಿ ಮಿತ್ರ’ ಆ್ಯಪ್ ಡಿಲೀಟ್ ಮಾಡಿ, https://onelink.to/evmithra ಮೂಲಕ  ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ವ್ಯಾಲೆಟ್‌ ನಲ್ಲಿ ಹಣ ಉಳಿದಿದ್ದರೂ ಚಿಂತಿಸಬೇಕಿಲ್ಲ.  ಹೊಸ ಆ್ಯಪ್‌ ಗೆ ಹಣ ವರ್ಗಾವಣೆಯಾಗುತ್ತದೆ.

ಕನ್ನಡ, ಹಿಂದಿ, ಇಂಗ್ಲಿಷ್‌ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಇವಿ ಚಾರ್ಚಿಂಗ್‌ ಮಾಹಿತಿ ಲಭ್ಯವಿದ್ದು, ಹಣ ಪಾವತಿಗೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.  ರಿಟೇಲ್‌ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್, ಪ್ರೊಫೈಲ್ ಇರಲಿದೆ. ಬಳಕೆದಾರರ ಸ್ನೇಹಿಯಾಗಿರುವ ಆ್ಯಪನ್ನು ಈಗಾಗಲೇ 15,000ಕ್ಕೂ ಹೆಚ್ಚು ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಬಳಕೆ ಹೇಗೆ?

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಫೋನ್‌ ನಂಬರ್‌ ನಮೂದಿಸಿ, ಲಾಗಿನ್‌ ಆಗಿ. ನಿಮ್ಮ ಮೊಬೈಲ್‌ ಗೆ ಬರುವ ಓಟಿಪಿ ಸಂಖ್ಯೆ ದಾಖಲಿಸಿದ ನಂತರ ನಿಮ್ಮ ಲಾಗಿನ್‌ ಖಾತ್ರಿಯಾಗುವುದು. ಖಾಸಗಿ ಹಾಗೂ ವಾಣಿಜ್ಯ ಬಳಕೆದಾರರು ಈ ಒಂದೇ ಆ್ಯಪ್‌ ಮೂಲಕ ಚಾರ್ಚಿಂಗ್ ಸೌಲಭ್ಯ ಪಡೆಯಬಹುದಾಗಿದೆ. ಎಸಿ/ಡಿಸಿ ಚಾರ್ಚರ್‌ ಅಥವಾ ಮ್ಯಾಪ್‌ ಮೂಲಕ ಇವಿ ಬಳಕೆದಾರರು ಚಾರ್ಚಿಂಗ್ ಸ್ಟೇಷನ್‌ ಇರುವ ಜಾಗದ ಮಾಹಿತಿ ಪಡೆಯಬಹುದು.

ಸುಲಭ ಪಾವತಿ ಹಾಗೂ ಮರು ಪಾವತಿ:

ರಿಟೇಲ್‌ ಬಳಕೆದಾರರು ಆ್ಯಪ್‌ ನಲ್ಲಿ ಲಭ್ಯವಿರುವ  ವಾಲೆಟ್‌ ಗೆ ಹಣ ಭರ್ತಿ ಮಾಡಿ ಶುಲ್ಕ ಪಾವತಿಸಬಹುದು. ಯುಪಿಐ (ಗೂಗಲ್‌/ಫೋನ್‌ ಪೇ) ಮೂಲಕವೂ ಪಾವತಿ ಮಾಡಬಹುದು. ಬಿಲ್‌ ಡೆಸ್ಕ್‌ ಮೂಲಕವೂ ಶುಲ್ಕ ಪಾವತಿಗೂ ಅವಕಾಶವಿದೆ.  ಚಾರ್ಚಿಂಗ್‌ ಸಮಯದಲ್ಲಿ ಯಾವುದೇ ತಾಂತ್ರಿಕ ಅಡಚಣೆ ಉಂಟಾಗಿ ಚಾರ್ಚಿಂಗ್‌ ನಿಂತರೆ, ಬಳಕೆದಾರರಿಗೆ ಹಣ ಮರು ಪಾವತಿಯಾಗಲಿದೆ.

ವಾಣಿಜ್ಯ ಬಳಕೆದಾರಿಗೂ ವಿಶೇಷ ಸೌಲಭ್ಯ ಇದ್ದು, ತಮ್ಮ ವಾಹನಗಳ ಚಾಲಕರ ಚಲನೆ/ಚಾರ್ಚಿಂಗ್‌ ವಿವರದ ಬಗ್ಗೆ ನಿಗಾವಹಿಸಬಹುದು. ಸ್ಪೆಷಲ್‌ ಆ್ಯಕ್ಸಿಸ್‌ ಕೋಡ್‌ ಅಲ್ಲದೇ ಇನ್ನಿತರ ವಿಶೇಷ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ವಾಟ್ಸಾಪ್ ಬೆಂಬಲ: ಯಾವುದೇ ಚಾರ್ಜಿಂಗ್ ಅಪ್ಲಿಕೇಶನ್ ಇಲ್ಲದೆಯೂ ಇವಿ ವಾಹನಗಳ ಚಾರ್ಚ್‌ ಮಾಡಲು ಬೆಸ್ಕಾಂ ‘ಇವಿ ಮಿತ್ರ ಬಾಟ್‌’- ವಾಟ್ಸಾಪ್‌ ನೆರವು ಪಡೆಯಬಹುದಾಗಿದ್ದು, ಲಿಂಕ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.

“ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ರಾಜ್ಯದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಕಲ್ಪಿಸುವ ನೋಡೆಲ್‌ ಏಜೆನ್ಸಿಯಾಗಿದೆ. ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಜಾಲ ವಿಸ್ತರಣೆ ಮತ್ತು ಉತ್ತಮ ನಿರ್ವಹಣೆಗೆ ಒತ್ತು ನೀಡುವ ಬೆಸ್ಕಾಂ ಈ ಹೊಸ ಇಂಟರ್‌ಫೇಸನ್ನು ಗ್ರಾಹಕರಿಗೆ ಪರಿಚಯಿಸಿದೆ. ಇವಿ ಬಳಕೆದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಬಳಕೆದಾರರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂಬುದೇ ಸಂತಸದ ವಿಷಯ ಎಂದು  ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ENGLISH SUMMARY

BESCOM’s “EV Mitra” App Gets a New Interface – Available in 11 Languages Including Kannada
Bengaluru, September 9, 2024: The Bangalore Electricity Supply Company Limited (BESCOM) has launched a new interface for its popular “EV Mitra” app, which provides a seamless charging experience for electric vehicle (EV) users. The app, available for both Android and iOS devices, is designed to make EV charging easier, more accessible, and more efficient.
Key Features of EV Mitra:
• User Profile Management: Allows users to personalize their experience.
• Charging Station Details: Provides comprehensive information about charging stations, including location, availability, and amenities.
• Secure User Authorization: Ensures secure access via OTP or RFID.
• Reservation and Booking History: Enables users to reserve chargers and view their booking history.
• Multiple Payment Options: Supports wallet top-ups, UPI (Google Pay, PhonePe), and Bill Desk payments.
Multilingual Support: The app is available in 11 languages, including Kannada, Hindi, English, and several other regional languages, making it user-friendly for a diverse audience.
With over 15,000+ downloads, the “EV Mitra” app is quickly becoming a favorite among EV users in Karnataka. Both private and fleet users can easily locate charging stations via AC/DC charger or map options and enjoy a hassle-free payment process.
Steps to Use NEW and revamped BESCOM EV Mithra App
1. Uninstall old EV Mithra app.
2. ⁠Download new app from the app store using this link https://onelink.to/evmithra.
3. ⁠Login using phone number. If you have pending wallet balance in the old app, they will now show up in the new app as well.
4. Once logged in, explore the various features tailored for private and fleet users.
Enhanced Payment Flexibility and Refund Assurance: Retail users can easily top up their in-app wallets or make payments through UPI or Bill Desk. In case of any technical issues that interrupt charging, users are assured a refund for the amount paid. Fleet operators can also benefit from special access codes and privileges tailored to their needs, all managed via the “EV Mitra” platform.
WhatsApp Support: To further enhance convenience, BESCOM introduces the “EV Mitra” WhatsApp bot, allowing users to initiate charging and make payments with just one message – eliminating the need for additional apps.
quote : Mahantesh Bilagi, Managing Director, BESCOM:
“As the nodal agency for developing EV charging infrastructure in Karnataka, BESCOM is committed to expanding our network and improving the management of charging stations. The new interface of the ‘EV Mitra’ app is a step in that direction, and it’s encouraging to see over 15,000+ downloads already. We invite all EV users to take advantage of this enhanced experience.”

Key words: EV Mitra, new format,  information, regional languages ​, Kannada