ಮೈಸೂರು,ಸೆಪ್ಟಂಬರ್,18,2021(www.justkannada.in): ಮೈಸೂರಿನಲ್ಲಿ ದೇವಾಲಯ ತೆರವು ಕಾರ್ಯಚರಣೆ ಮುಂದಾದ ಜಿಲ್ಲಾಡಳಿತ ಈಗ ಸರ್ಕಾರದ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ದೇವಾಲಯ ತೆರವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದೆ. ಆದರೆ ಈ ಕಾರ್ಯಾಚರಣೆಯನ್ನ ಶಾಶ್ವತವಾಗಿ ತಡೆಯಾಗಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಹಿಂದೂ ಸಮಿತಿ ಎಚ್ಚರಿಕೆಯ ಅಭಿಯಾನ ಹಮ್ಮಿಕೊಂಡಿದೆ.
ನಗರದ ಬನಶಂಕರಿ ದೇವಾಲಯದ ಮುಂದೆ ರಾಷ್ಟ್ರೀಯ ಹಿಂದೂ ಸಮಿತಿ ಎಚ್ಚರಿಕೆಯ ಅಭಿಯಾನವನ್ನು ಆಯೋಜಿಸಲಾಗಿತ್ತು. ಅಭಿಯಾನದ ನಂತರ “ಇನ್ನು ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಕಲ್ಲನ್ನು ಸಹ ಮುಟ್ಟಲು ಬಿಡುವುದಿಲ್ಲ, ಯಾವುದೇ ಪಕ್ಷ ಭೇದವಿಲ್ಲದೆ ಹಿಂದುತ್ವಕ್ಕಾಗಿ ಹೋರಾಡುತ್ತೇವೆ ಹಿಂದುತ್ವ ಎಂಬುದು ತಾಯಿಗೆ ಸಮ” ಎಂದು ಪ್ರತಿಜ್ಞೆ ಸ್ವೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ “ಅಧಿಕಾರಿಗಳು ಏಕಾಯಕಿ ಹಿಂದೂಗಳ ದೇವಾಲಯವನ್ನು ಧ್ವಂಸ ಮಾಡಿರುವುದು ಬಹಳ ಖಂಡನೀಯ ಅಧಿಕಾರಿಗಳಿಗೆ ಹಿಂದೂಗಳೆಂದರೆ ತಾತ್ಸಾರ ಯಾಕೆ? ಕೇವಲ ಒಂದು ಧರ್ಮವನ್ನು ಗುರಿ ಇಡುವುದು ಎಷ್ಟು ಸರಿ? ಇದೇ ರೀತಿ ದೇವಾಲಯಗಳನ್ನು ಒಡೆದು ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ತೀವ್ರ ಸ್ವರೂಪದ ಹೋರಾಟ ಮಾಡಲು ನಾವು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಈ ಅಭಿಯಾನದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಸಂಘಟನೆಯ ಪದಾಧಿಕಾರಿಗಳಾದ ಪ್ರದೀಪ್ ತೇಜಸ್ ಗಗನ್ ವಿನಯ್ ಚೇತು ಮಲ್ಲೇಶ್ ಮಹೇಶ್ ಪವನ್ ಸೋಮು ಚಂದನ್ ಮನೋಜ್ ಶಶಾಂಕ್ ಉಪಸ್ಥಿತರಿದ್ದರು.
Key words: evacuation -temples – permanent –breakdown-Campaign – National Hindu Committee