ಬೆಂಗಳೂರು, ಮೇ 20, 2020 (www.justkannada.in): ದ್ವಿತೀಯ ಪಿಯುಸಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಯ್ದ ಕೇಂದ್ರಗಳಲ್ಲಿ ಮೇ.21ರಿಂದ ಆರಂಭವಾಗಲಿದೆ.
ಮೌಲ್ಯಮಾಪನಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು, ಇಂಗ್ಲೀಷ್ ಹೊರತುಪಡಿಸಿ ಇತರ ಪತ್ರಿಕೆಗಳ ಮೌಲ್ಯಮಾಪನವನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಮುಂದಾಗಿದೆ.
ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೆಯ ದಿನಾಂಕ ಜೂನ್.18ಕ್ಕೆ ನಿಗದಿಪಡಿಸಲಾಗಿದ್ದು, ಪರೀಕ್ಷೆಗೂ ಮುನ್ನವೇ ಮೌಲ್ಯಮಾಪನ ಪೂರ್ಣಗೊಳಿಸಲು ಇಲಾಖೆ ಉದ್ದೇಶಿಸಿದೆ ಎನ್ನಲಾಗಿದೆ.
ಮೌಲ್ಯಮಾಪನ ವಿಚಾರಕ್ಕೆ ಸಂಬಂಧಿಸಿದಂತೆ ಡಿಪಿಯುಇ, ಮೌಲ್ಯಮಾಪನ ಕೇಂದ್ರದ ಉಸ್ತುವಾರಿ ಅಧಿಕಾರಿಗಳೊಂದಿಗೆ ಮೇಲ್ವಿಚಾರಕರನ್ನು ನೇಮಕ ಮಾಡಿದ್ದು, ಈಗಾಗಲೇ ಕಳೆದ ಶನಿವಾರವೇ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಮಂಗಳೂರು, ಮೈಸೂರುು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ ಎನ್ನಲಾಗಿದೆ.