ನವದೆಹಲಿ, ಮೇ 31, 2020 (www.justkannada.in): ದೇಶದಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಗೊಳಿಸಿದ್ದರೂ ಕೂಡಾ ಜನರು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ನಾಲ್ಕನೇ ಹಂತದ ಲಾಕ್ ಡೌನ್ ನ ಕೊನೆಯ ದಿನವಾದ ಭಾನುವಾರ ದೇಶದ ಜನರನ್ನು ಉದ್ದೇಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಿದ ಅವರು, ಬಸ್, ವಿಮಾನ ಸೇವೆ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಶ್ರಮಿಕ್ ವಿಶೇಷ ರೈಲು ಸಂಚರಿಸುತ್ತಿದೆ. ವಿಮಾನಗಳು ಪುನರಾರಂಭಗೊಂಡಿದೆ. ಕೈಗಾರಿಕೆಗಳು ಸೇರಿದಂತೆ ಬಹುತೇಕ ಆರ್ಥಿಕ ಚಟುವಟಿಕೆ ಎಂದಿನಂತೆ ಕಾರ್ಯನಿರ್ವಹಿಸತೊಡಗಿವೆ. ಈ ಪರಿಸ್ಥಿತಿಯಲ್ಲಿ ನಾವು ಇನ್ನಷ್ಟು ಎಚ್ಚರಿಕೆ ಹಾಗೂ ಜಾಗ್ರತೆಯಿಂದ ಇರಬೇಕಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಒಂದು ವರ್ಷವನ್ನು ಪೂರೈಸಿ ಎರಡನೇ ವರ್ಷಕ್ಕೆ ಕಾಲಿರಿಸುತ್ತಿರುವ ವೇಳೆಯಲ್ಲಿ ಮನ್ ಕೀ ಬಾತ್ ಮೂಲಕ ಹಲವಾರು ವಿಷಯಗಳನ್ನು ಇದೇ ವೇಳೆ ಹಂಚಿಕೊಂಡರು.