ಎಲ್ಲರೂ ಗಾಂಧಿ ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ, ಯಾರೂ ಸ್ವೀಕರಿಸಿಲ್ಲ : ತಗಡೂರು ಸತ್ಯನಾರಾಯಣ ವಿಷಾದ  

ಮೈಸೂರು,ಅಕ್ಟೋಬರ್,29,2020(www.justkannada.in) : ದೇಶದಲ್ಲಿ ಎಲ್ಲರೂ ಗಾಂಧಿಯನ್ನು ತಿಳಿದುಕೊಂಡಿದ್ದಾರೆ. ಆದರೆ, ಯಾರೂ ಸ್ವೀಕರಿಸಿಲ್ಲ. ಯಾರು ಮಹಾತ್ಮ ಗಾಂಧೀಜಿಯವರ ವಿಚಾರ ಧಾರೆ ಹಾಗೂ ಸಿದ್ಧಾಂತಗಳನ್ನು ಪಾಲಿಸುತ್ತಾರೋ ಆಗ ಮಾತ್ರ ಅವರನ್ನು ಸ್ವೀಕರಿಸಲು ಸಾಧ್ಯ ಎಂದು ಹಿರಿಯ ಗಾಂಧಿ ಮಾರ್ಗಿ ತಗಡೂರು ಸತ್ಯನಾರಾಯಣ ವಿಷಾದವ್ಯಕ್ತಪಡಿಸಿದರು.jk-logo-justkannada-logo‘’ಎಲ್ಲರ ಭಾರತ’’ ಪುಸ್ತಕ ಬಿಡುಗಡೆ ಕಾರ್ಯಕ್ರಮ 

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಗಾಂಧಿ ಭವನ ಹಾಗೂ ಗಾಂಧಿ ವಿಚಾರ ಪರಿಷತ್ತು ವತಿಯಿಂದ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ನಡೆದ ಈ.ಧನಂಜಯ ಎಲಿಯೂರು ಅವರು ಕನ್ನಡಕ್ಕೆ ಅನುವಾದಿಸಿರುವ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಅವರ ಭಾಷಣ ಸಂಗ್ರಹ ಕೃತಿಯಾದ ‘’ಎಲ್ಲರ ಭಾರತ’’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾರ್ಥಿಸಿ, ಪೂಜಿಸಿ, ವಿಗ್ರಹ ಮಾಡಿ ಕೂರಿಸಿದ್ದೇವೆ

ಗಾಂಧೀಜಿ ಅವರನ್ನು ಪ್ರಾರ್ಥಿಸಿ, ಪೂಜಿಸಿ, ವಿಗ್ರಹ ಮಾಡಿ ಕೂರಿಸಿದ್ದೇವೆ. ಆದರೆ, ಅವರ ತ್ಯಾಗ, ಬಲಿದಾನ ಹಾಗೂ ಸಂದೇಶವನ್ನು ನಮ್ಮ ಹೃದಯಕ್ಕೆ ಬಿಟ್ಟಿಕೊಳ್ಳುತ್ತಿಲ್ಲ. ಇದು ನಮ್ಮ ದೇಶದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ನೈಜ್ಯ ಮಾಹಿತಿ ಯುವ ಸಮುದಾಯ್ಕಕೆ ಸಿಗುತ್ತಿಲ್ಲ

ಮಹಾತ್ಮ ಗಾಂಧೀಜಿ ಕುರಿತು ನೈಜ್ಯ ಮಾಹಿತಿ ಯುವ ಸಮುದಾಯ್ಕಕೆ ಸಿಗುತ್ತಿಲ್ಲ. ಹೀಗಾಗಿ ಗಾಂಧಿ ಅಧ್ಯಯನ ಸಂಸ್ಥೆಗಳು, ಅವರ ಬಗ್ಗೆ ನೈಜ ಮಾಹಿತಿ, ಸಂಗತಿಗಳನ್ನು ತಿಳಿಸುವ ಜೊತೆಗೆ ಅವರ ವಿಚಾರ ಧಾರೆಗಳನ್ನು ಜನರಿಗೆ ತಿಳಿಸಿಕೊಡಬೇಕು ಎಂದರು.

ತತ್ತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು

ಗಾಂಧೀಜಿ ಅವರ ವಿಚಾರ ಧಾರೆಗಳು ಹಾಗೂ ತತ್ತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕು. ದೇಶವನ್ನು ಇಬ್ಬಾಗ ಮಾಡಲು ಗಾಂಧೀಜಿಯೂ ಅವರ ಸಹಕಾರ ಇದೆ ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ. ದೇಶ ವಿಭಜನೆಯನ್ನು ಅವರು ಆರಂಭದಿಂದಲೂ ವಿರೋಧಿಸಿದ್ದರು ಎಂದು ತಿಳಿಸಿದರು.Everybody,knows,about,Gandhi,But,nobody,accepts,Tagadur Satyanarayana,regrets

ಸಂವಿಧಾನ ಮುಂದಿಟ್ಟುಕೊಂಡು ಯಾವ ಸರ್ಕಾರವು ಆಡಳಿತ ಮಾಡುತ್ತಿಲ್ಲ

ಗಾಂಧಿ ವಿಚಾರ ಪರಿಷತ್ ಅಧ್ಯಕ್ಷ ಪ.ಮಲ್ಲೇಶ್ ಮಾತನಾಡಿ, ಪ್ರಸ್ತುತ ಗಾಂಧೀಜಿ ಮತ್ತು ಅವರ ಚಿಂತನೆಗಳು ನಮಗೆ ಅನಿವಾರ್ಯ ಆಗಬೇಕಿದೆ. ನಮ್ಮ ಸಂವಿಧಾನದಲ್ಲಿ ಗಾಂಧಿ ಸ್ಪಷ್ಟವಾಗಿದ್ದಾರೆ. ಆದರೆ, ಸಂವಿಧಾನವನ್ನು ಮುಂದಿಟ್ಟುಕೊಂಡು ಯಾವ ಸರ್ಕಾರವು ಆಡಳಿತ ಮಾಡುತ್ತಿಲ್ಲ. ಇಂದು ನ್ಯಾಯಾಂಗ ವ್ಯವಸ್ಥೆಯನ್ನೇ ಅನುಮಾನದಿಂದ ನೋಡುವ ಪರಿಸ್ಥಿತಿ ಬಂದೊದಗಿಸೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ ಕುಮಾರ್ ಈ. ಧನಂಜಯ ಎಲಿಯೂರು ಅವರು ಕನ್ನಡಕ್ಕೆ ಅನುವಾದಿಸಿರುವ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಅವರ ಭಾಷಣ ಸಂಗ್ರಹ ಕೃತಿಯಾದ ಎಲ್ಲರ ಭಾರತ ಪುಸ್ತಕ ಬಿಡುಗಡೆ ಮಾಡಿದರು.

ಈ ವೇಳೆ ಗಾಂಧಿ ಭವನದ ನಿರ್ದೇಶಕ ಪ್ರೊ.ಎಂ.ಎಸ್. ಶೇಖರ್, ಲೇಖಕ ಈ. ಧನಂಜಯ ಎಲಿಯೂರು ಇದ್ದರು.

key words : Everybody-knows-about-Gandhi-But-nobody-accepts- Tagadur Satyanarayana-regrets