ಬೆಂಗಳೂರು, ಸೆಪ್ಟೆಂಬರ್ ,27,2023(www.justkannada.in): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ವಿರೋಧಿಸಿ ಸೆಪ್ಟಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು ರಾಜ್ಯದ ಎಲ್ಲರೂ ಸಹಕಾರ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದರು.
ಈ ಕುರಿತು ಮಾತನಾಡಿದ ವಾಟಾಳ್ ನಾಗರಾಜ್, ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ರಾಜ್ಯ ಬಂದ್ ಗೆ ಎಲ್ಲರೂ ಸಹಕಾರ ನೀಡಬೇಕು. ಹೋಟೆಲ್, ಶಾಪಿಂಗ್ ಮಾಲ್ಗಳು, ಅಂಗಡಿಗಳು ಬಂದ್ ಮಾಡಬೇಕು. ಕರ್ನಾಟಕ ಬಂದ್ಗೆ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ ಎಂದು ತಿಳಿಸಿದರು.
ರಾಜ್ಯದ ಜನರಿಗಾಗಿ ನಾವು ಅನೇಕ ಬಂದ್ ಗೆ ಬೆಂಬಲ ನೀಡಿದ್ದೇವೆ. ಸೆಪ್ಟೆಂಬರ್ 29ರ ಕರ್ನಾಟಕ ಬಂದ್ ಬಹಳ ಮುಖ್ಯವಾದದ್ದು. ಈ ಬಂದ್ ಒಂದು ಜಿಲ್ಲೆಗೆ ಮಾತ್ರ ಸೀಮಿತಲ್ಲ, ಕರ್ನಾಟಕದಾದ್ಯಂತ ಬಂದ್ ನಡೆಯಲಿದೆ. ಟೋಲ್, ರೈಲು, ಹೆದ್ದಾರಿ, ವಿಮಾನ ಹಾರಾಟ ಬಂದ್ ಆಗಲಿದೆ. ಟೌನ್ಹಾಲ್ ನಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
Key words: Everyone- cooperate – September 29- bandh -Vatal Nagaraj