ಬೆಂಗಳೂರು,ಆಗಸ್ಟ್,15,2021(www.justkannada.in): ಕರ್ನಾಟಕ ರಾಜ್ಯ ವಿಪ್ರ ಪೋಟೋ ಮತ್ತು ವಿಡಿಯೋಗ್ರಫರ್ಸ್ ಅಸೋಸಿಯೇಷನ್(ರಿ) ಹಾಗೂ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ(ರಿ) ಸಹಯೋಗದೊಂದಿಗೆ 75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ನಾಡಿನ ಹಿರಿಯ ಛಾಯಾಗ್ರಾಹಕ ರಾದ ಸಿ.ಬಿ. ಕಾಶಿನಾಥ್ ಅವರು ನೆರವೇರಿಸಿದರು.
ಹಿರಿಯ ಛಾಯಾಗ್ರಾಹಕರಾದ ಸಿ.ಬಿ.ಕಾಶಿನಾಥ್ ರವರು ಮಾತನಾಡಿ ಎಲ್ಲರೂ ಸಾಮಾಜಿಕ ಕಳಕಳಿಯನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಶ್ರಮಿಸಬೇಕು, ಛಾಯಾಗ್ರಹಣ ಲೋಕದಲ್ಲಿ ನಾನು ಇಷ್ಟು ವರ್ಷಗಳ ಕಾಲ ಧ್ವಜಾರೋಹಣದ ಫೋಟೋ ತೆಗೆಯುತ್ತಿದ್ದೆ ಆದರೆ ಈಗ ನಾನೇ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ಮಾಡುವ ಸೌಭಾಗ್ಯ ದೊರಕಿರುವುದು ನನ್ನ ಅದೃಷ್ಟವೇ ಸರಿ, ಎಲ್ಲರೂ ತಮ್ಮ ಬಿಡುವಿನ ಸಮಯದಲ್ಲಿ ದೇಶ ಸೇವೆ ಮಾಡುವಂತೆ ಕರೆ ನೀಡಿದರು, ರಾಜ್ಯ ಸರ್ಕಾರವು ಹಿರಿಯ ಹಾಗೂ ಅನನ್ಯ ಸೇವೆ ಸಲ್ಲಿಸಿರುವ ಛಾಯಾಗ್ರಾಹಕರನ್ನು ಗುರುತಿಸಿ ಗೌರವಿಸುವಂತೆ ಹೇಳಿದರು, ಎಲ್ಲಾ ಛಾಯಾಗ್ರಹಕರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು.
ಸ್ವಾತಂತ್ರ್ಯೋತ್ಸವ ಬರಲು ದುಡಿದ ಅನೇಕ ಮಹನೀಯರು ಹಾಗೂ ಯೋಧರು ಬಲಿದಾನ ನೀಡಿದ ಎಲ್ಲರನ್ನು ಸ್ಮರಿಸಿದರು. ವೇದಿಕೆಯಲ್ಲಿ ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಹಾಗೂ ಶಿಕ್ಷಕಿ ಬಿ. ವಿ.ಶ್ರೀಮತಿ ಹಾಗೂ ಛಾಯ ಗ್ರಾಹಕರ ಸಂಘಟನೆಯ ಅಧ್ಯಕ್ಷರಾದ ರಮೇಶ್ ಬಿ.ಕೆ ರವರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಛಾಯಾಗ್ರಹಕರು ಗಳಾದ ಶ್ರೀನಿವಾಸರಾವ್ ಟಿ.ಎಸ್ ಹಾಗೂ ಅನಂತಮೂರ್ತಿ, ಹಾಗೂ ಪದಾಧಿಕಾರಿಗಳಾದ ಪ್ರಸನ್ನ ಕುಲಕರ್ಣಿ ಪ್ರದೀಪ್ ಗುರುಪ್ರಸಾದ್, ಮತ್ತಿತರರು ಪಾಲ್ಗೊಂಡಿದ್ದರು.
Key words: Everyone- strive – feel social concern –independence day-Senior photographer -C.B.Kasinath