ಮೈಸೂರು,ಮಾರ್ಚ್,22,2024(www.justkannada.in): ಕಸನುಗಳು ಮತ್ತು ಗುರಿ ಮಾತ್ರ ಹೊಂದಿದ್ದರೆ ಸಾಲದು, ಅದನ್ನು ಖಚಿತವಾದ ಯೋಜನೆಯೊಂದಿಗೆ ಕಠಿಣ ಶ್ರಮವನ್ನು ಅನುಷ್ಠಾನಗೊಳಿಸುವುದು ಬಹಳ ಮುಖ್ಯ, ಆಗ ಯಶಸ್ಸು ಖಂಡಿತ ಸಾಧ್ಯವಾಗುತ್ತದೆ ಆದ್ದರಿಂದ ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬುದನ್ನು ಅರಿತು ಪ್ರಾಮಾಣಿಕ ಶ್ರಮವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ಡಾ. ಕಾ. ರಾಮೇಶ್ವರಪ್ಪ ಹೇಳಿದರು.
ಅವರು ದಿನಾಂಕ:21.03.2024ರ ಗುರುವಾರ ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿದ್ದ ೬೫ ದಿನಗಳ ಪಿಡಿಒ/ಎಫ್‌ಡಿಎ/ವಿಎ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದರು.
ಗುರುವಿನ ಮಾರ್ಗದರ್ಶನ ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ. ಯಾವುದೇ ಪೂರ್ವಗ್ರಹ. ಅಳುಕು. ಇಲ್ಲದೆ. ಗುರಿಯತ್ತ ಮುನ್ನುಗ್ಗಬೇಕು ಶಿಕ್ಷಣವಿಲ್ಲದವರ ಬಾಳು ಸಮಸ್ಯೆಯಿಂದ ಕೂಡಿರುತ್ತದೆ ಎಂದು ಹೇಳಿದರು.
ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವಾಸು, ನಿವೃತ್ತ ಐಎಎಸ್. ಅಧಿಕಾರಿ. ಕೆ. ಶಿವರಾಮು ನಮಗೆಲ್ಲರಿಗೂ ಮಾದರಿಯ ವ್ಯಕ್ತಿಗಳು. ಶಿವರಾಮು ಮತ್ತು ವಾಸು ಇಬ್ಬರೂ ಜ್ಞಾನಬುತ್ತಿಗೆ ಬೆಂಬಲವಾಗಿದ್ದವರು. ಶಿವರಾಮು ತಳಸಮುದಾಯದ ಅಸ್ಮಿತೆ, ಅಂತೆಯೇ ವಾಸು. ಹೃದಯವಂತರು. ಸದ್ಗಣ ಹೊಂದಿದ್ದ ಮೇರು ವ್ಯಕ್ತಿತ್ವದವರು. ಈ ಇಬ್ಬರೂ ನಮ್ಮನ್ನು ಆಗಲಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಶಿವರಾಮು ಯಾವುದೇ ಹಿನ್ನೆಲೆಯಿಲ್ಲದ ತುಳಿತಕ್ಕೊಳಗಾದ ವ್ಯಕ್ತಿ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಅವರು ಸ್ಫೂರ್ತಿ ಎಂದರು.
ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಜೆ. ಬಿ. ರಂಗಸ್ವಾಮಿ ಏಕಾಗ್ರತೆಯಿಂದ ಓದಿ ಮನನ ಮಾಡಿಕೊಳ್ಳುವುದರಿಂದ ವಿಷಯ ತಲೆಗೆ ಹತ್ತಲಿದೆ. ಯಾವುದೇ ಪಠ್ಯಗಳನ್ನು ದಕ್ಕಿಸಿಕೊಳ್ಳಬೇಕೆಂದರೆ ನಿರಂತರ ಅಧ್ಯಯನ ಅಗತ್ಯ. ವಿದ್ಯಾರ್ಥಿಗಳು. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಯಶಸ್ಸು ಸಾಧಿಸಬೇಕು ಎಂದರು. ಕೆ. ಶಿವರಾಮು ಅವರು ಮೈಸೂರಿನ ನಗರಪಾಲಿಕೆ ಆಯುಕ್ತರಾಗಿದ್ದರಿಂದ ಹಿಡಿದು ಅವರು ಜೀವ ಇರುವವರೆಗೂ ಜ್ಞಾನಬುತ್ತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು.
ವಾಸು ಅವರ ಸಂಬಾವಿತನ ಔದಾರ್ಯವನ್ನು ನೆನೆದು ಸಾಹಿತ್ಯ ಸಮ್ಮೇಳನದ ಉಸ್ತುವಾರಿ ವಹಿಸಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿದ್ದರ ಬಗೆಗೆ ತಿಳಿಸಿ ಇವರ ಆದರ್ಶ ಗುಣಗಳೇ ಯುವಕರಿಗೆ ಆದರಣೀಯ ಮಾರ್ಗದರ್ಶಿ ತುಮಕೂರಿನ ಕ್ಯಾತಸಂದ್ರದ ಕವಿತಾ ಕೃಷ್ಣ ಕವಿ, ಸಹೃದಯಿ ವಿದ್ವಾಂಸರು. ಲಿಂಗೈಕ್ಯ ಸಿದ್ಧಗಂಗಾ ಮಠದ ಸ್ವಾಮೀಜಿಯವರಿಂದ ಹಿಡಿದು ಕೈವಲ್ಯ ಮಠದ ಸ್ವಾಮೀಜಿಯವರಿಗೂ ಅಚ್ಛುಮೆಚ್ಚಾಗಿದ್ದರು. ಆನೇಕ ಕೃತಿಗಳನ್ನ ರಚಿಸಿದ್ದರು. ಜ್ಞಾನಬುತ್ತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದರು.
ಜನಪದ ಗಾಯಕ ಅಮ್ಮರಾಮಚಂದ್ರ ಭಾಗವಹಿಸಿ ರೈತಗೀತೆ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವಯಸ್ಕರ ಶಿಕ್ಷಣ ಸಮಿತಿ ನಿರ್ದೇಶಕ ವೈ.ಎನ್. ಶಂಕರೇಗೌಡ ಶಿಬಿರಾರ್ಥಿಗಳಿಗೆ ಶುಭಹಾರೈಸಿ, ಕೆ.ಶಿವರಾಮು, ಮಾಜಿ ಮೇಯರ್ ವಾಸು ಕವಿತಾ ಕೃಷ್ಣರವರನ್ನು ನೆನೆದರು. ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್. ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಎಸ್. ಗಣೇಶ್, ಡಾ. ಈ ಶಿವಪ್ರಸಾದ್, ಡಾ. ಪಳನಿಸ್ವಾಮಿ ಮೂಡಗೂರು, ಪ್ರೊ. ವಿ.ಜಯಪ್ರಕಾಶ್, ಡಾ. ಸುದರ್ಶನ್, ಪ್ರೊ. ಸಿ.ಕೆ. ಕಿರಣ್ ಕೌಶಿಕ್, ಕೆ.ವೈ ನಾಗೇಂದ್ರ, ಯು.ಎಂ.ಶರದ್ ರಾವ್ ಭಾಗವಹಿಸಿದ್ದರು.
Key words: Ex-MLA-Vasu- Retired IAS Officer- K.Sivaramu- Poet Kavita Krishna –mysore- Gnanabutti.