ಮೈಸೂರು, ಸೆಪ್ಟೆಂಬರ್ 16, 2019 (www.justkannada.in): ಅಮೀತ್ ಶಾ ದಡ್ಡ. ಹಿಂದು ಭಾಷೆಯನ್ನ ಬಲವಂತವಾಗಿ ಹೇರಲು ಹೊರಟಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಏನು ಇಲ್ಲ. ಹಿಂದಿ ರಾಷ್ಟ್ರ ಭಾಷೆಯಲ್ಲ. ಕನ್ನಡದಂತೆ ಅದು ಒಂದು ಭಾಷೆ. ಹಿಂದ ಕಲಿಯಲು ನಮ್ಮ ವಿರೋಧವಿಲ್ಲ. ಸ್ವಯಂ ಪ್ರೇರಣೆಯಿಂದ ಕಲಿಯುವವರಿಗೆ ನಮ್ಮ ವಿರೋಧ ವಿಲ್ಲ. ಆದರೆ ಹಿಂದಿಯನ್ನ ಬಲವಂತವಾಗಿ ಹೇರಬೇಡಿ. ಕೇಂದ್ರ ಸರ್ಕಾರದ ಯಾವುದೆ ಪರೀಕ್ಷೆಗಳು ಕನ್ನಡದಲ್ಲಿ ಆಗಬೇಕು ಎಂದು ಒತ್ತಾಯಿಸಿದರು.
ಐಬಿಪಿಎಸ್ ಪರೀಕ್ಷೇ ಬೇರೆ ಭಾಷೆಯಲ್ಲಿ ಮಾಡುವುದರಿಂದ ಕನ್ನಡಿಗರಿಗೆ ಅನ್ಯಾಯ ವಾಗುತ್ತೆ. ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ಆಗಬೇಕು ಎಂದು ಹೇಳಿದರು.
ಜಿಟಿಡಿ ಸತ್ಯ ಹೇಳಿದ್ದಾರೆ: ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ಜಿಟಿಡಿ ಹೇಳಿದ್ದಾರೆ. ಅವರು ಸತ್ಯವನ್ನೆ ಹೇಳಿದ್ದಾರೆ. ಅವರು ಹೇಳಿದನ್ನ ನಾನು ಹೇಳುತ್ತಿದ್ದೆನೆ. ಹುಣಸೂರಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಮೈತ್ತಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ.ನಾನು ಏನಾದ್ರು ಹೇಳುದ್ರೆ ರಾಜಕೀಯದ ಬಣ್ಣ ಕೊಡುತ್ತಾರೆ. ಈಗ ಅವರ ಪಕ್ಷದ ಶಾಸಕರೇ ಸರ್ಕಾರ ಪತನಕ್ಕೆ ಏನು ಕಾರಣ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.