ಬೆಂಗಳೂರು,ಆಗಸ್ಟ್,4,2022(www.justkannada.in): 545 ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿದ ಬಳಿಕ ಪರೀಕ್ಷಾ ಫಲಿತಾಂಶ ಪ್ರಕಟ ಮಾಡಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಪಿಎಸ್ ಐ ನೇಮಕಾತಿ ಹಗರಣದಲ್ಲಿ ಕೆಲವರು ಅರೆಸ್ಟ್ ಆಗಲಿದ್ದಾರೆ. ನೇಮಕಾತಿ ಅಧಿಸೂಚನೆ ರದ್ದಾಗಲ್ಲ ಆದ್ರೆ ಹೊಸದಾಗಿ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳಿಗೆ ವಯಸ್ಸಿನ ಬಗ್ಗೆ ಭಯಬೇಡ ವಯಸ್ಸಿನ ಅವಧಿ ಸಡಿಲ ಮಾಡುತ್ತೇವೆ. ಆರೋಪಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲ್ಲ. 5 ಸಾವಿರ ಕಾನ್ಸ್ ಟೇಬಲ್ ಹುದ್ದೆ ಭರ್ತಿಯಾಗುತ್ತೆ ಎಂದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಎರಡು ಕೊಲೆ ಪ್ರಕರಣದ ಪ್ರಮುಖ ಆರೋಪಿ ಪತ್ತೆಯಾಗಿದ್ದಾರೆ. ಫಾಜಿಲ್ ಹತ್ಯೆ ತನಿಖೆ ಮುಗಿಯುತ್ತಾ ಬಂದಿದೆ. ಪ್ರವೀಣ ಹತ್ಯೆ ತನಿಖೆ ಪ್ರಗತಿಯಲ್ಲಿದೆ ಪ್ರಮುಖ ಆರೋಪಿ ಯಾರು ಅಂತಾ ಗೊತ್ತಾಗಿದೆ. ಎಂದರು.
Key words: exam date – announce- after – PSI scam- investigation-Home Minister -Araga jnanendra