ಬೆಂಗಳೂರು:ಮೇ-14:(www.justkannada.in) ಕೆಪಿ ಎಸ್ ಸಿ ಅಧ್ಯಕ್ಷ ಶ್ಯಾಂಭಟ್ ಹೆಸರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 10 ಲಕ್ಷ ರೂ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಿಎಆರ್ನ ನಿವೃತ್ತ ಆರ್ಎಸ್ಐ ಸಿದ್ದಯ್ಯ ಆರೋಪಿಸಿದ್ದಾರೆ.
ಕೆಪಿ ಎಸ್ ಸಿ ಅಧ್ಯಕ್ಷ ಶ್ಯಾಭ್ ಅವರಿಗೆ ಹೇಳಿ ತಮ್ಮ ಮಗನಿಗೆ ಅಬಕಾರಿ ಇನ್ಸ್ಪೆಕ್ಟರ್ ಕೆಲಸ ಕೊಡಿಸುವುದಾಗಿ ಹೇಳಿ ಧನರಾಜ್ ಹಾಗೂ ಪ್ರದೀಪ್ ಇಬ್ಬರು 10 ಲಕ್ಷ ರೂ ಪಡೆದಿದ್ದಾನೆ ಎಂದು ಸಿಎಆರ್ನ ನಿವೃತ್ತ ಆರ್ಎಸ್ಐ ಸಿದ್ದಯ್ಯ ಉಪ್ಪಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಮ್ಮ ಪುತ್ರ ನಾಗೇಂದ್ರನಿಗೆ ಅಬಕಾರಿ ಇನ್ಸ್ಪೆಕ್ಟರ್ ಹುದ್ದೆ ಕೊಡಿಸಲು ನೆರವಾಗುವುದಾಗಿ ಧನ್ರಾಜ್ ಮತ್ತು ಪ್ರದೀಪ್ ನಂಬಿಸಿದ್ದರು. ತನಗೆ 20 ಲಕ್ಷ ರೂ. ಕೊಡುವುದಾದರೆ ಶ್ಯಾಂ ಭಟ್ ಅವರನ್ನು ಪರಿಚಯಿಸಿ ಕೆಲಸ ಕೊಡಿಸೋದಾಗಿ ಧನರಾಜ್ ಹೇಳಿದ್ದ. ಅದರಂತೆ ಗಾಂಧಿನಗರದ ದಿವಾ ರೆಸಿಡೆನ್ಸಿ ಹೋಟೆಲ್ನಲ್ಲಿ ಧನ್ರಾಜ್ಗೆ ಮೊದಲ ಕಂತಿನ 4.5 ಲಕ್ಷ ರೂ. ಕೊಟ್ಟಿದ್ದೆ. ಬಳಿಕ 5.50 ಲಕ್ಷ ರೂ. ಹಣವನ್ನು ಅವರಿಗೆ ಕೊಟ್ಟಿದ್ದೆ. ಹೀಗೆ ಒಟ್ಟು 10 ಲಕ್ಷ ರೂ. ಪಡೆದ ಆತ, ಕೆಪಿಎಸ್ಸಿ ಪ್ರಕಟಿಸುವ 2ನೇ ಲಿಸ್ಟ್ನಲ್ಲಿ ತಮ್ಮ ಪುತ್ರನ ಹೆಸರಿರುತ್ತದೆ ಎಂದು ಭರವಸೆ ನೀಡಿದ್ದ. ಆದರೆ ಲಿಸ್ಟ್ ಪ್ರಕಟವಾದರೂ ನನ್ನ ಪುತ್ರನ ಹೆಸರು ಇರಲಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ತಮ್ಮಿಂದ ಪಡೆದಿರುವ 10 ಲಕ್ಷ ರೂ. ಹಣವನ್ನು ಶ್ಯಾಂ ಭಟ್ ಅವರಿಗೆ ಕೊಟ್ಟಿರುವುದಾಗಿ ಆತ ಹೇಳುತ್ತಿದ್ದಾನೆ. ಆದರೆ, ಕೆಲಸವೂ ಆಗಿಲ್ಲ. ಹಾಗಾಗಿ ದೂರಿನಲ್ಲಿ ಶ್ಯಾಂ ಭಟ್ ಹಾಗೂ ಧನ್ರಾಜ್ ಹಾಗೂ ಪ್ರದೀಪ್ ವಿರುದ್ಧವೂ ದೂರು ದಾಖಲಿಸಿದ್ದಾರೆ.
Excise Inspector,KPSC Shaym Bhat,Siddaiah,person loses Rs 10 lakhs