EXCLUSIVE : ಸೋಮವಾರ ಮುಂಜಾನೆ ಮೈಸೂರಲ್ಲಿ ಮಂಜು : ತಲೈವಾ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ 2 ಗಂಟೆ ತಡ.

 

ಮೈಸೂರು, ಜ.27, 2020 : (www.justkannada.in news ) : ತಮಿಳುನಟ , ಸೂಪರ್​ ಸ್ಟಾರ್​ ರಜನಿಕಾಂತ್​​ ಇಂದು ಬೆಳಗ್ಗೆ ಚೆನ್ನೈ ಮೂಲಕ ಮೈಸೂರಿಗೆ ಪ್ರಯಾಣ ಬೆಳೆಸಿದ್ದ ವಿಮಾನ ದಟ್ಟ ಮಂಜಿನ ಕಾರಣದಿಂದ ಒಂದುವರೆ ಗಂಟೆ ವಿಳಂಬವಾಗಿ ಲ್ಯಾಂಡಿಂಗ್ ಆದ ಘಟನೆ ನಡೆದಿದೆ.

Heavy mist- delays- Mysore- flight by two hours-superstar Rajinikanth
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ನಟ ರಜನಿಕಾಂತ್ ಜತೆಗೆ ಅಭಿಮಾನಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಹೀಗೆ….

ನಟ ರಜನಿಕಾಂತ್ ಇಂದು ಬೆಳಗ್ಗೆ 6.50ಕ್ಕೆ ಚೆನ್ನೈನಿಂದ ಮೈಸೂರಿಗೆ ಖಾಸಗಿ ವಿಮಾನದ ಮೂಲಕ ತೆರಳಿದ್ದರು. ಈ ವಿಮಾನ ಬೆಳಗ್ಗೆ 8.10ಕ್ಕೆ ಮೈಸೂರು ತಲುಪಬೇಕಾಗಿತ್ತು. ಆದರೆ ಮೈಸೂರು ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜು ಆವರಿಸಿದ್ದ ಕಾರಣ, ಮುಂಜಾಗ್ರತ ಕ್ರಮವಾಗಿ ವಿಮಾನದ ಲ್ಯಾಂಡಿಂಗ್ ವಿಳಂಬ ಮಾಡಲು ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ನಟ ರಜನಿಕಾಂತ್, ಸಹ ಪ್ರಯಾಣಿಕರ ಜತೆ ವಿಮಾನದಲ್ಲೇ ( 42 ಮಂದಿ ಪ್ರಯಾಣಿಕರು ) ಒಂದುವರೆ ಗಂಟೆ ಕಾಲ ಕಳೆಯಬೇಕಾಯಿತು. ಈ ವೇಳೆ ಕೆಲ ಪ್ರಯಾಣಿಕರು ನೆಚ್ಚಿನ ನಟನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಕಡೆಗೆ ವಿಮಾನ ನಿಲ್ದಾಣದ ತಾಂತ್ರಿಕ ಸಿಬ್ಬಂದಿಗಳ ಸೂಚನೆ ಸಿಕ್ಕ ಕೂಡಲೇ 9.30 ರ ಸುಮಾರಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯಿತು.

 Heavy mist- delays- Mysore- flight by two hours-superstar Rajinikanth
ಇಂದು ಬೆಳಗ್ಗೆ ಮೈಸೂರಲ್ಲಿ ಮಂಜು ಮುಸುಕಿದ ವಾತಾವರಣ…

ಬಂಡೀಪುರಕ್ಕೆ ಪಯಣ :

ಸೂಪರ್ ಸ್ಟಾರ್ ರಜನಿಕಾಂತ್ , ಮೈಸೂರಿನಿಂದ ನೇರವಾಗಿ ಬಂಡೀಪುರಕ್ಕೆ ಪಯಣ ಬೆಳೆಸಿದರು ಎಂದು ರಜನಿ ಆಪ್ತ ಮೂಲಗಳು ಜಸ್ಟ್ ಕನ್ನಡ ಡಾಟ್ ಇನ್ ಗೆ ಮಾಹಿತಿ ನೀಡಿವೆ. ಬಂಡೀಪುರದಲ್ಲಿ ಚಿತ್ರೀಕರಣ ಕಾರಣಕ್ಕೋ ಅಥವಾ ವಿಶ್ರಾಂತಿ ಸಲುವಾಗಿ ತೆರಳಿದರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇನ್ನು ಒಂದೆರೆಡು ದಿನಗಳ ಕಾಲ ರಜನಿಕಾಂತ್ , ಬಂಡೀಪುರದಲ್ಲೇ ವಾಸ್ತವ್ಯ ಹೂಡುವರು ಎಂಬುದಾಗಿ ತಿಳಿದು ಬಂದಿದೆ.

key words : Heavy mist- delays- Mysore- flight by two hours-superstar Rajinikanth

ENGLISH SUMMARY :

Heavy mist delays Mysore-bound flight by two hours. A Mysore-bound private flight carrying 42 passengers including superstar Rajinikanth delayed 2 hours on monday morning due to heavy mist. airport officials said.
Rajinikanth in the meantime interacted with some of the passengers onboard and also clicked pictures with them, officials added.