ನಾನು ಸಚಿವ ಆಗಬೇಕು ಎಂಬುದು ಜನರ ನಿರೀಕ್ಷೆ- ನೂತನ ಸಂಸದ ಡಾ.ಮಂಜುನಾಥ್.

ನವದೆಹಲಿ,ಜೂನ್,7,2024 (www.justkannada.in): ನಾನು ಕೇಂದ್ರ ಸಚಿವ ಆಗಬೇಕು ಎಂಬುದು ಜನರ ನಿರೀಕ್ಷೆಯಾಗಿದೆ. ಆರೋಗ್ಯ ಸಚಿವ ಆಗಬೇಕು ಎಂಬುದು ಜನರ ಅನಿಸಿಕೆಯಾಗಿದೆ ಎಂದು ನೂತನ ಸಂಸದ ಡಾ.ಸಿ.ಎನ್ ಮಂಜುನಾಥ್ ತಿಳಿಸಿದರು.

ಇಂದು ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಸಿಎನ್ ಮಂಜುನಾಥ್, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುತ್ತಿರುವುದು ಸಂತಸವಾಗುತ್ತಿದೆ  ನೆಹರು ಬಳಿಕ 3ನೇ ಬಾರಿ ಪ್ರಧಾನಿಯಾದ ನಾಯಕ ನರೇಂದ್ರ ಮೋದಿ. ನಾನು ಸಚಿವ ಆಗಬೇಕು ಅಂತ ಜನರು ನೀರಿಕ್ಷೆ ಮಾಡುತ್ತಿದ್ದಾರೆ.   ಆರೋಗ್ಯ ಸಚಿವ ಆಗಬೇಕು ಜನರ  ಅನಿಸಿಕೆ. ಮೊದಲು  ಎನ್ ಡಿಎ ಸರ್ಕಾರ ರಚನೆ ಆಗಬೇಕು ಸಚಿವ ಸ್ಥಾನದ  ಬಗ್ಗೆ ಈಗಲೇ ಏನು ಹೇಳಲು ಆಗಲ್ಲ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಸಿಎನ್ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರನ್ನ ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

Key words: expectation, minister, MP, Dr. Manjunath