ಬೆಂಗಳೂರು,ಜೂನ್,1,2023(www.justkannada.in): ಗ್ಯಾರಂಟಿ ಯೋಜನೆಯನ್ನ ನಮಗೂ ವಿಸ್ತರಿಸಿದ ಎಂದು ಸಿಎಂ ಸಿದ್ದರಾಮಯ್ಯ ಗೆ ಲೈಂಗಿಕ ಅಲ್ಪಸಂಖ್ಯಾತರು ಮನವಿ ಸಲ್ಲಿಸಿದರು.
ಇಂದು ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನ ಅಕ್ಕೈ ಪದ್ಮಶಾಲಿ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಲೈಂಗಿಕ ಅಲ್ಪ ಸಂಖ್ಯಾತರು ಭೇಟಿಯಾಗಿ ಗ್ಯಾರಂಟಿ ಯೋಜನೆಯನ್ನ ಲೈಂಗಿಕ ಅಲ್ಪಸಂಖ್ಯಾತರಿಗೂ ಕಲ್ಪಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಲೈಂಗಿಕ ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯುವಂತೆ ಮನವಿ ಮಾಡಿದ್ದಾರೆ.
Key words: Extend – guarantee scheme – us-sexual minorities – met -CM Siddaramaiah