ಬೆಂಗಳೂರು,ಸೆಪ್ಟಂಬರ್,9,2020(www.justkannada.in): ಸೆಪ್ಟಂಬರ್ 21 ರಿಂದ ಸೆಪ್ಟಂಬರ್ 30ರವರೆಗೆ ನಡೆಯುವ ರಾಜ್ಯ ವಿಧಾನಮಂಡಲ ಅಧಿವೇಶನವನ್ನ ಮೂರು ವಾರಗಳ ಕಾಲ ವಿಸ್ತರಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸ್ಪೀಕರ್ ಗೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯದ ಜನ ಕಂಡು ಕೇಳರಿಯದ ರೀತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್-19, ಪ್ರವಾಹ ತಲೆದೂರಿದ್ದು ಜನರು ಹೈರಾಣಾಗಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಿದೆ.
ಇಂತಹ ಸನ್ನಿವೇಶದಲ್ಲಿ ಸರ್ಕಾರ ಅಧಿವೇಶನ ನಡೆಸುತ್ತಿದೆ. ಆದರೆ 8 ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಲಾಗುತ್ತಿದೆ. ಈ ಅಧಿವೇಶನದಲ್ಲಿ 20ಕ್ಕೂ ಹೆಚ್ಚು ಸುಗ್ರಿವಾಜ್ಞೆಗಳನ್ನು ಒಳಗೊಂಡಂತೆ 35ಕ್ಕೂ ಹೆಚ್ಚು ಮಸೂದೆಗಳನ್ನು ಮಂಡಿಸಲಾಗುತ್ತದೆ. ಹೀಗಾಗಿ ಅಧಿವೇಶನದ ಸಮಯ ಸಾಕಾಗುವುದಿಲ್ಲ. ಅದ್ದರಿಂದ ಈ ಅಧಿವೇಶನವನ್ನು ಕನಿಷ್ಟ ಮೂರುವಾರಗಳ ಕಾಲ ಅಂದರೇ ಅಕ್ಟೋಬರ್ 15ರವರೆಗೆ ವಿಸ್ತರಿಸಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
Key words: Extend -Session – three weeks- Former CM -Siddaramaiah appeals to Speaker