ರಾಯಚೂರು,ಅಕ್ಟೋಬರ್,10,2022(www.justkannada.in): ಗೊಬ್ಬರ, ಡೀಸೆಲ್, ಪೆಟ್ರೋಲ್, ಸಿಮೆಂಟ್, ಗ್ಯಾಸ್, ಸೇರಿದಂತೆ ಎಲ್ಲ ಬೆಲೆಗಳ ಏರಿಕೆ ಆಗಿವೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರ ಬಡವರ, ರೈತರ ರಕ್ತ ಹೀರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ರಾಯಚೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೀವೆ ಅಂದ್ರು, ರೈತರ ಖರ್ಚು ಮಾಡುವುದು ದುಪ್ಪಟ್ಟು ಆಯ್ತು ಹೊರೆತು, ಆದಾಯ ಆಗಲಿಲ್ಲ. ರಾಹುಲ್ ಗಾಂಧಿ ಪಾದಯಾತ್ರೆ ಕಂಡು ಬಿಜೆಪಿ ಅವರಿಗೆ ನಡುಕು ಶುರುವಾಗಿದೆ ಎಂದರು.
SC, ST ಮೀಸಲಾತಿ ವಿಚಾರ. ಪ್ರಿಯಾಂಕ ಖರ್ಗೆ ಅವರಿಗೆ ಒತ್ತಡ ಹಾಕಿ ನಾವು ಮಾಡಿಸಿದ್ದು. ಕಾಂಗ್ರೆಸ್ ವರದಿ ಕೊಟ್ಟಿ2 ವರ್ಷ 3 ತಿಂಗಳ ಆಗಿದೆ. ಈಗ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಭಾರತ್ ಜೋಡೋ ಪಾದಯಾತ್ರೆ ಮುಗಿದ ಮೇಲೆ ಮುಂದೆ ಎರಡು ಟೀಮ್ ಮಾಡಿ ಟ್ರ್ಯಾಕ್ಟರ್, ರಥಯಾತ್ರೆ ಅಂತ ಮಾಡುತ್ತಿದ್ದೇವೆ. ಎರಡು ಟೀಮ್ ಮಾಡಿ ರಥಯಾತ್ರೆ ಮಾಡುತ್ತೇವೆ. ಡಿಕೆಶಿ, ಸಿದ್ದರಾಮಯ್ಯ, ಸಿನಿಯರ್ ಲೇಡರ್ಸ್ ಎಲ್ಲರೂ ಇರುತ್ತಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ದೇಶದಲ್ಲಿ ಗೊಬ್ಬರ, ಡೀಸೆಲ್, ಪೆಟ್ರೋಲ್, ಸಿಮೆಂಟ್, ಗ್ಯಾಸ್, ಸೇರಿದಂತೆ ಎಲ್ಲ ಬೆಲೆಗಳ ಏರಿಕೆ ಆಗಿವೆ. ಜನರು ಬಳಸುವ ದಿನನಿತ್ಯದ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದಾರೆ. ಅದಾನಿ ಶ್ರೀಮಂತವಾಗಿ ಬೆಳೆಯಲು ನರೇಂದ್ರ ಮೋದಿ ಕಾರಣ. ಬಿಜೆಪಿ ಸರ್ಕಾರ ಬಡವರ, ರೈತರ ರಕ್ತ ಹೀರುತ್ತಿದ್ದಾರೆ. ದೇಶ ಸಾಲಗಾರ ದೇಶವಾಗುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 53 ಲಕ್ಷ 11ಸಾವಿರ ಕೋಟಿ ರೂ. ಮಾತ್ರ ಸಾಲ ಇತ್ತು. ಇದೀಗ ದೇಶದಲ್ಲಿ 152 ಲಕ್ಷ ಕೋಟಿ ಸಾಲವನ್ನು ಮೋದಿ ಮಾಡಿದ್ದಾರೆ
ಬೆಲೆ ಏರಿಕೆಯಿಂದ ದೇಶ ತತ್ತರಿಸಿ ಹೋಗಿದೆ. ಬಿಜೆಪಿ ಸರ್ಕಾರ ಯುವಕರಿಗೆ ಕೆಲಸ ಕೊಡಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ ಮೋದಿಗೆ ಪತ್ರ ಬರೆದಿದ್ರೂ 40% ಕಮಿಷನ್ ಬಗ್ಗೆ ತನಿಖೆ ಮಾಡಿಸಿಲ್ಲ. ನನ್ನ ಕಾಲದಲ್ಲಿ ಕಮಿಷನ್ ಬಗೆಗಿನ 8 ಕೇಸ್ ಗಳನ್ನು CBI ಗೆ ರೇಫರ್ ಮಾಡಿದ್ದೆ. ಆದರೆ ಒಂದೇ ಒಂದು ಕೇಸ್ CBI ಗೆ ಬಿಜೆಪಿ ಸರ್ಕಾರ ಕೊಟ್ಟಿಲ್ಲ ಎಂದು ಸಿದ್ಧರಾಮಯ್ಯ ಗುಡುಗಿದರು.
Key words: failure – control- price rise- BJP government -Siddaramaiah
ENGLISH SUMMARY…
BJP Govt. has completely failed in controlling prices of essential commodities: Fleecing is the blood of poor people and farmers – Siddaramaiah
Raichur, October 10, 2022 (www.justkannada.in): “All the prices including the prices of fertilizers, diesel, petrol, cement, LPG, etc. have increased. The BJP government has completely failed in controlling the increasing prices. It is fleecing the blood of poor people and the farmers of the country,” alleged leader of the opposition in the assembly Siddaramaiah.
He addressed a press meet at the Circuit House in Raichur today. “When it came to power the BJP had assured to double the farmers income, however only farmers expenses doubled, income didn’t. Rahul Gandhi’s padayatra has triggered fear among the BJP people,” he observed.
He informed that the increase in reservation quota for SC, ST was because of the pressure mounted on Priyank Kharge by us. “The Congress submitted the report 2-3 years ago. However, the present government has come forward to implement it now,” he alleged.
“After the Bharath Jodo Yatra, we will conduct a tractor, rathayatra in two teams. All the leaders including Siddaramaiah, D.K. Shivakumar and others will participate in it,” he added.
“The prices of all the commodities including fertilizers, diesel, petrol, cement, LPG, etc. has increased. The Union Govt. has imposed GST on all the daily use commodities. Narendra Modi is the reason for Adani’s increased wealth. The BJP govt. is fleecing the blood of poor and farmers. The loan of our country is increasing. The amount of loan when Congress was in power was Rs.53,11,000 crore, which has mounted to Rs.152 lakh,” he said.
Keywords: Siddaramaiah/ BJP govt/ price rise/ alleged