ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೇ ಆತ್ಮಹತ್ಯೆ ಹಿಡಿಯುವ ಪರಿಸ್ಥಿತಿ: ಸಿಎಂಗೆ ಪತ್ರ ಬರೆದು ಮತ್ತೊಂದು ಗುತ್ತಿಗೆದಾರರ ಸಂಘದಿಂದ ಎಚ್ಚರಿಕೆ.

ಬೆಂಗಳೂರು,ಆಗಸ್ಟ್,24,2022(www.justkannada.in):  ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ದೂರಿನ ಬಳಿಕ  ಇದೀಗ ಮತ್ತೊಂದು  ಗುತ್ತಿಗೆದಾರರ ಸಂಘ  ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಬಾಕಿ ಇರುವ ಬಿಲ್ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.

ಬಾಕಿ ಇರುವ ಬಿಲ್ ಬಿಡುಗಡೆಗೊಳಿಸದೇ ಇದ್ದರೆ ಗುತ್ತಿಗೆದಾರರು ಆತ್ಮಹತ್ಯೆ ಹಾದಿ ಹಿಡಿಯುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ಪ್ರತಿಭಟನೆ ಎಚ್ಚರಿಕೆ ನೀಡಿದೆ.

ಪ್ರತಿಯೊಬ್ಬ ಗುತ್ತಿಗೆದಾರರು ತೀವ್ರ ಸಂಕಷ್ಟ ಹಾಗೂ ಹಣಕಾಸಿನ ತೊಂದರೆಯಿಂದ ಕಾಮಗಾರಿ ಸ್ಥಳಕ್ಕೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿಗಳ ಉಪಕರಣ ನೀಡಿದ ವ್ಯಾಪಾರಿಗಳು, ಕಾರ್ಮಿಕರು, ಸಾಲ ನೀಡಿದ ಸಂಸ್ಥೆಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕೆಲ ಗುತ್ತಿಗೆದಾರರು ಒತ್ತಡದಿಂದ ಮನ ನೊಂದಿದ್ದಾರೆ.

ಕೆಲವರು ಸಾಲಭಾದೆ ತಾಳಲಾರದೇ ಆತ್ಮಹತ್ಯೆಯಂತಹ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಚಾರ ನಮ್ಮ ಸಂಘದ ಗಮನಕ್ಕೆ ಬಂದಿದೆ. ನಮ್ಮ ಸಂಘದ ವತಿಯಿಂದ ಎಲ್ಲಾ ಗುತ್ತಿಗೆದಾರರನ್ನು ಕರೆಸಿ ಸಮಾಧಾನಪಡಿಸಿ ಕಳಿಸಿದ್ದೇವೆ. ಇನ್ನೊಮ್ಮೆ ಕೊನೆಯದಾಗಿ  ಸಿಎಂ ರವರನ್ನ ಭೇಟಿ ಮಾಡುವುದಾಗಿ ಹೇಳಿ ಕಳಿಸಿದ್ದೇವೆ.

ಗುತ್ತಿಗೆದಾರರು ಎಸ್.ಸಿ, ಎಸ್.ಟಿ. ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳನ್ನ ಮಾಡಿದ್ದಾರೆ. ಕಳೆದ ಏಳೆಂಟು ತಿಂಗಳಿದ ಬಾಕಿ ಪಾವತಿ ಬೆಳೆಯುತ್ತಲೇ ಇದೆ. ಸುಮಾರು 1200 ಕೋಟಿಯಷ್ಟು ಮೊತ್ತ ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿದೆ.  ಬಾಕಿ ಬಿಲ್ ಬಿಡುಗಡೆಗೆ ಮನವಿ ಮಾಡಿ ತಮ್ಮನ್ನು ಭೇಟಿಯಾಗಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನ ಭೇಟಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಹೀಗೆ ಮುಂದುವರೆದರೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

Key words: Failure – release – bill -Another –contractors- association – letter-CM.

ENGLISH SUMMARY…

Will have to commit suicide if pending bills are not cleared: Another Contractor Assn. writes letter to CM
Bengaluru, August 24, 2022 (www.justkannada.in): After a complaint from the Karnataka State Contractors’ Association, another Contractors’ Association has written a letter to Chief Minister Basavaraj Bommai appealing him to clear the pending bills immediately.
In the letter written by the Karnataka Residential Educational Institutions Association Contractors’ Association addressing the Chief Minister Bommai, it has appealed to immediately clear the pending bills, or else the contractors’ will have to commit suicide inevitably.
“Each and every contractor is facing severe difficulty. None of them are in a condition to go to the work place due to deep financial trouble. They are facing lot of pressure from the material suppliers and financial institutions that have provided loans. Many of them have reached a stage where they have to commit suicide without any other way out. We have made efforts to pacify them by holding a meeting. We have pacified them by stating that we will meet the Chief Minister for one last time,” the letter reads.
“These contractors’ have undertaken the SC, ST and Backward Castes Community Residential school building construction works. However, the pending payment is increasing from the last 7-8 months. The pending amount that is pending to be released from the government is estimated at Rs. 1,200 crore. Though we met and appealed to you regarding this no action has been taken. Our efforts in meeting Minister Kota Srinivas Poojari has also not yielded any results. If this continues we will be forced to take out a protest,” the Karnataka Residential Educational Institutions Contractors’ Association has warned.
Keywords: Contractors’/ warn/ State Government/ bills pending