ಬೆಂಗಳೂರು,ಮಾರ್ಚ್,25,2022(www.justkannada.in): ತನ್ನ ಪುತ್ರಿಗೆ ನಕಲಿ ಜಾತಿ ಪ್ರಮಾಣ ಪತ್ರ ಕೊಡಿಸಿ ಸರ್ಕಾರದ ಸವಲತ್ತು ಪಡೆದಿದ್ದಾರೆ ಎಂಬ ಆರೋಪ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಮಗಳು ಶಾಲೆಗೆ ಹೋದಾಗ ಜಾತಿ ಪ್ರಮಾಣ ಪತ್ರ ಪಡೆದಿದ್ದೆ. ಜಾತಿ ಪ್ರಮಾಣ ಪತ್ರದಿಂದ ಯಾವುದೇ ಸವಲತ್ತು ಪಡೆದಿಲ್ಲ. ಮಗಳ ಮೇಲೆ ವಿನಾಕಾರಣ ಆರೋಪಿಸಿದರೇ ಸುಮ್ಮನಿರಲ್ಲ. ಮಾನನಷ್ಟ ಮೊಕದ್ಧಮೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ 40 ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ ದಾಖಲೆ ಇದ್ದರೆ ಬಿಡಲಿ. ಬುಟ್ಟಿಯಲ್ಲಿ ಹಾವು ಇದೆ ಎಂದು ಬುರುಡೆ ಬಿಡಬೇಡಿ. ಈ ರೀತಿಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದರು.
Key words: fake certificates -MLA-MP Renukacharya-warned-defamation case