ಬೆಂಗಳೂರು,ಡಿಸೆಂಬರ್,18,2020(www.justkannada.in): ಕೋಡಿಹಳ್ಳಿ ಚಂದ್ರಶೇಖರ್ ನಕಲಿ ಹೋರಾಟಗಾರ. ಕೋಡಿಹಳ್ಳಿ ಚಂದ್ರಶೇಖರ್ ಆದಾಯದ ಮೂಲದ ಬಗ್ಗೆ ತನಿಖೆಯಾಹಲಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನಾನು ಗದ್ದೆ ನಾಟಿ ಮಾಡಿದ್ದೇನೆ, ಗದ್ದೆ ಉತ್ತಿದ್ದೇನೆ, ಟ್ರ್ಯಾಕ್ಟರ್ ಓಡಿಸಿದ್ದೇನೆ , ಭತ್ತ ಬಿತ್ತಿದ್ದೇನೆ. ಈ ನಕಲಿ ಹೋರಾಟಗಾರ ಯಾವತ್ತಾದ್ರು ಹೊಲ ಉತ್ತಿದ್ದಾರಾ. ಅವರ ಆದಾಯದ ಮೂಲ ಬಹಿರಂಗ ಮಾಡಲಿ ಇದರ ವಿಚಾರವಾಗಿ ಕೃಷಿ ಮತ್ತು ಕಂದಾಯ ಸಚಿವರ ಬಳಿ ಮಾತಾಡುತ್ತೇನೆ. ಅವರ ಆದಾಯದ ಬಗ್ಗೆ ತನಿಖೆ ಮಾಡಿಸಲು ಒತ್ತಾಯ ಮಾಡುತ್ತೇನೆ ಎಂದರು.
ಹಾಗೆಯೇ ವಾಗ್ದಾಳಿ ಮುಂದುವರೆಸಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡೋನು ನೀನು. ಕಾಂಗ್ರೆಸ್ ಸರ್ಕಾರದಲ್ಲಿ ತುಟಿ ಬಿಚ್ಚಲಿಲ್ಲ. ಸತ್ಯಹರಿಶ್ಚಂದ್ರ ನೀನು, ಇದಕ್ಕೆ ಉತ್ತರ ಕೊಡು. ನಿನ್ನ ಆಸ್ತಿ ಕೇವಲ ಎರಡೂವರೆ ಎಕರೆ, ಎಲ್ಲಿಂದ ಬಂತು ಇಷ್ಟೊಂದು ಸಂಪತ್ತು ಎಂದು ಹರಿಹಾಯ್ದರು.
ನಕಲಿ ಹೋರಾಟಗಾರನ ಅಸಲಿ ಕಥೆ ಇವತ್ತು ಸಂಪೂರ್ಣ ಮಾಹಿತಿ ಕೊಡುತ್ತೇನೆ. 2012 ರಲ್ಲಿ ಸುಮಾರು 200 ಜನರಿಗೆ ಆರು ಲಕ್ಷ ಎಂಟು ಲಕ್ಷ ಹಣ ಪಡೆದು ಸೈಟ್ ಕೊಡಿಸುತ್ತೇನೆ ಎಂದು ತೆಗೆದುಕೊಂಡಿರುವ ಬ್ಲಾಕ್ ಮೇಲರ್. ಭೈರಯ್ಯ ಅನ್ನುವವರಿಗೆ ಸೊಸೈಟಿಯಿಂದ ಸೈಟ್ ಅಲಾಟ್ ಆಗಿತ್ತು. ಅವರ ಬಳಿ ಹಣ ತೆಗೆದುಕೊಂಡು ಇವತ್ತು ನಾಳೆ ಎಂದು ಅವರ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಎಲ್ಲರು ಭಯ ಭೀತಿಯಿಂದ ಹೋದ್ರೆ ಹೋಗ್ಲಿ ಅಂತ ಸುಮ್ಮನಾಗಿದ್ದಾರೆ.
ಜಿ ಭೈರಯ್ಯ ಎನ್ನುವವರು ಪೊಲೀಸ್ ಸ್ಟೇಷನ್ ಗೆ ಕಂಪ್ಲೆಟ್ ಕೊಟ್ಟಿದ್ರು. ಆಗಿನ ಕಾಂಗ್ರೆಸ್ ಸರ್ಕಾರ ಇವರನ್ನು ರಕ್ಷಣೆ ಮಾಡಿತ್ತು. ಅವರು ಕೋರ್ಟ್ ನಲ್ಲಿ ಇನ್ನೂ ಹೋರಾಟ ಮಾಡುತ್ತಿದ್ದಾರೆ. ಯಾರಿಗೆ ಮೋಸ ಮಾಡಿದ್ದಾರೆ ಅವರು ಹೊರಗೆ ಬಂದು ಮಾತಾಡುತ್ತಿಲ್ಲ. ನಕಲಿ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್. ಹಸಿರು ಶಾಲಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಆ ಮನುಷ್ಯ ಐಶಾರಾಮಿ ಜೀವನ ನಡೆಸ್ತಿದ್ದಾರೆ. ಮಂಡ್ಯ, ಮೈಸೂರು ಸೇರಿ ರಾಜ್ಯಾದ್ಯಂತ ರೈತರ ಸಾವಾಯ್ತು. ಮೃತ ರೈತ ಕುಟುಂಬಗಳಿಗೆ ಯಾಕೆ ಸಾಂತ್ವಾನ ಹೇಳಲಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಒಳ ಒಪ್ಪಂದ ಮಾಡಿಕೊಳ್ತಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಎಂ.ಪಿ ರೇಣುಕಾಚಾರ್ಯ ಆರೋಪ ಮಾಡಿದರು.
Key words: Fake fighter -Kodihalli Chandrasekhar -investigates – source – income-MLA -MP Renukacharya