ಮೈಸೂರು, ಜ.೨೭, ೨೦೨೫: ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಕೆರೆಯ ಬಳಿ ಕಾಣಿಸಿಕೊಳ್ಳುತ್ತಿರುವ ಹೆಣ್ಣು ಹುಲಿ. ಮಧ್ಯರಾತ್ರಿಯ ವ್ಯಾಘ್ರನ ಘರ್ಜನೆಗೆ ಬೆಚ್ಚಿಬಿದ್ದ ಗ್ರಾಮಸ್ಥರು ಎಂಬ ಸುದ್ಧಿ ಸುಳ್ಳು.
ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಹಾಗೂ ಮರಿಗಳು ಓಡಾಡುತ್ತಿರುವ ವಿಡಿಯೋ ಹರಿಬಿಟ್ಟು ಇದು ಮೈಸೂರು ಜಿಲ್ಲೆ, ನಂಜನಗೂಡು ಸಮೀಪದ ಮಡುವಿನಹಳ್ಳಿ ಗ್ರಾಮದ ಬಳಿ ಮೊಬೈಲ್ ನಲ್ಲಿ ಸೆರೆ ಹಿಡಿದ ವಿಡಿಯೋ ಎಂದು ಹೇಳಲಾಗಿತ್ತು.
ಈ ಸುದ್ದಿ ಹಾಗೂ ವಿಡಿಯೋ ಸತ್ಯಾಸತ್ಯತೆಯನ್ನು ಗೂಗಲ್ ಫ್ಯಾಕ್ಟ್ ಚೆಕ್ ತಂಡದೊಂದಿಗೆ “ಜಸ್ಟ್ ಕನ್ನಡ “ ಪರಿಶೀಲಿಸಿದಾಗ ಇದೊಂದು ಸುಳ್ ಸುದ್ಧಿ ಎಂಬುದು ದೃಢಪಟ್ಟಿದೆ.
ಅಷ್ಟಕ್ಕೂ ಈ ವಿಡಿಯೋ ಸೆರೆ ಹಿಡಿದಿರುವುದು ಮೂರು ವರ್ಷಗಳ ಹಿಂದೆ. ಅದು ಉತ್ತರ ಪ್ರದೇಶದಲ್ಲಿ. ಈ ಬಗೆಗಿನ ಸಂಪೂರ್ಣ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
key words: tigress, 3 cubs, Mysore, video is fake news