ಮೈಸೂರು,ಜನವರಿ,5,2021(www.justkannada.in): ಬೆಳೆ ವೈಫಲ್ಯ, ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಭೋಗನಹಳ್ಳಿ ಗ್ರಾಮದ ಪುಟ್ಟರಾಜು (41) ಆತ್ಮಹತ್ಯೆಗೆ ಶರಣಾದ ರೈತ. ರೈತ ಪುಟ್ಟರಾಜು ಗ್ರಾ.ಪಂ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡರಾಗಿದ್ದರು.
4 ಎಕರೆ ಜಮೀನು ಹೊಂದಿದ್ದ ಪುಟ್ಟರಾಜು ಪಟ್ಟಣದ ಎಸ್ ಬಿಐ, ಎಡಿಬಿ ಬ್ಯಾಂಕ್ ನಲ್ಲಿ 8 ಲಕ್ಷ ಬೆಳೆ ಸಾಲ ಮಾಡಿದ್ದರು. ಜತೆಗೆ ಕೆ.ಆರ್.ನಗರದ ಖಾಸಗಿ ಬ್ಯಾಂಕ್ ನಲ್ಲಿ 4 ಲಕ್ಷ ಬೆಳೆ ಸಾಲ ಮಾಡಿದ್ದರು ಎನ್ನಲಾಗಿದೆ. ಕಳೆದ 2 ವರ್ಷದಿಂದ ತಂಬಾಕು ಬೆಳೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಪುಟ್ಟರಾಜು ಅವರಿಗೆ ನಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ಮನನೊಂದ ರೈತ ಪುಟ್ಟರಾಜು ಮನೆಯಲ್ಲಿ ಯಾರೂ ಇಲ್ಲದಿರುವಾಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Key words: farmer- commits -suicide –mysore-district