ಬೆಂಗಳೂರು,ಮೇ,25,2021(www.justkannada.in): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ಮೇ 26ಕ್ಕೆ(ನಾಳೆಗೆ) ಆರು ತಿಂಗಳು ಪೂರೈಸಲಿದ್ದು ಈ ಹಿನ್ನೆಲೆಯಲ್ಲಿ ನಾಳೆ ಕರಾಳದಿನಾಚಾರಣೆ ಆಚರಿಸಲು ರೈತಸಂಘಟನೆ ನಿರ್ಧರಿಸಿದೆ.
ದೆಹಲಿಯ ಸುತ್ತಾಮುತ್ತಾ, ದೇಶದಾದ್ಯಂತ ರೈತ ಚಳುವಳಿ ವಿಸ್ತರಿಸಿದ್ದು, ಪ್ರಪಂಚದ ಹಲವಾರು ದೇಶಗಳಿಂದಲೂ ರೈತರ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತರ ಹೋರಾಟ ನಾಳೆಗೆ 6 ತಿಂಗಳು ಪೂರೈಸಲಿದ್ದು, ಹೀಗಾಗಿ ಕೇಂದ್ರದ ವಿರುದ್ಧ ಮೇ 26 ರಂದು ದೇಶದಾದ್ಯಂತ ಕರಾಳ ದಿನಾಚರಣೆ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ಹೀಗಾಗಿ ರಾಜ್ಯದಲ್ಲೂ ಕರಾಳ ದಿನ ಆಚರಿಸಲು ಸಂಯುಕ್ತ ಹೋರಾಟ- ಕರ್ನಾಟಕ ತೀರ್ಮಾನ ಮಾಡಿದ್ದು, ಕಾರ್ಮಿಕರು, ದಲಿತರು, ಪ್ರಗತಿಪರ ಸಂಘಟನೆಗಳಿಂದ ತಮ್ಮ ತಮ್ಮ ಮನೆ, ಕಚೇರಿಗಳ ಮೇಲೆ ಕಪ್ಪು ಬಾವುಟವನ್ನು ಹಾರಿಸುವುದರ ಮೂಲಕ ಕರಾಳ ದಿನ ಆಚರಣೆ ಮಾಡಲಿದ್ದಾರೆ.
ಹಾಗೆಯೇ ರೈತ ಸಮೂಹ ಹೊಲಗಳಲ್ಲಿ ಕಪ್ಪು ಬಟ್ಟೆ ಧರಿಸಿ ಹೊಲಗದ್ದೆಗಿಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
Key words: Farmer- Organization’s- decision – May 26-black day-badagalapur nagendra