ಜ.26ರಂದು ಗಣರಾಜ್ಯೋತ್ಸವದ ಪ್ರತಿಯಾಗಿ ರೈತ ರಾಜ್ಯೋತ್ಸವ ಆಚರಣೆ- ಕುರುಬೂರು ಶಾಂತಕುಮಾರ್..

ಮೈಸೂರು,ಜನವರಿ,9,2021(www.justkannada.in): ಜನವರಿ 26ರಂದು ಗಣರಾಜ್ಯೋತ್ಸವದ ಪ್ರತಿಯಾಗಿ ರೈತ ರಾಜ್ಯೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.jk-logo-justkannada-mysore

ಮೈಸೂರಿನ ಗನ್ ಹೌಸ್ ಬಳಿಯ ಕುವೆಂಪು ಪಾರ್ಕ್ ನಲ್ಲಿ  ರಾಜ್ಯ ಕಬ್ಬು ಬೆಳಗಾರ ಸಂಘ ಸಭೆ ನಡೆಸಿ ಈ ನಿರ್ಧಾರ ಮಾಡಲಾಗಿದ್ದು,  ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಎಚ್ಚರಿಕೆ ನೀಡಿದೆ.

ಸಭೆ ಬಳಿಕ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ದೆಹಲಿಯಲ್ಲಿ ಜನವರಿ 26 ರಂದು ನಡೆಯಲಿರುವ ರೈತರ ಟ್ರ್ಯಾಕ್ಟರ್ ಮೆರವಣಿಗೆ ಹಾಗೂ ರೈತ ರಾಜ್ಯೋತ್ಸವಕ್ಕೆ ಕಬ್ಬು ಬೆಳಗಾರರ ಸಂಘ ಬೆಂಬಲ ನೀಡಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಮಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ರೈತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ಅರ್ಥೈಸಿಕೊಳ್ಳುತ್ತಿಲ್ಲ. ಈಗ ತರುತ್ತಿರುವ ಕೃಷಿ ಕಾನೂನು ನಿಂದ ಆಗುವ ಅನಾಹುತಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಇಷ್ಟಾದರೂ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಬಿಡುತ್ತಿಲ್ಲ. ಹೀಗಾಗಿ ಜನವರಿ 26ರಂದು ಗಣರಾಜ್ಯೋತ್ಸವ ನಡೆಯಲಿದ್ದು ಇದಕ್ಕೆ ಪ್ರತಿಯಾಗಿ  ರೈತ ರಾಜ್ಯೋತ್ಸವ ಆಚರಿಸಲಿದ್ದೇವೆ ಎಂದರು. Farmer Rajyotsava -celebration – republic day- 26th January – mysore-Kurubur Shantakumar

ಈಗಾಗಲೇ ದೆಹಲಿಯಲ್ಲಿ ರೈತರು ಸಭೆ ನಡೆಸಿ ರೈತರ ರಾಜ್ಯೋತ್ಸವ ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜನವರಿ 26ರಂದು ಪ್ರತಿಭಟನೆ ಮಾಡಲಿದ್ದೇವೆ. ಹೀಗಾಗಿ ರೈತ ವಿರೋಧಿ ನೀತಿಗಳನ್ನು ಕೂಡಲೇ ಕೈಬಿಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಪ್ರತಿಭಟನೆ ಉಗ್ರ ರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ENGLISH SUMMARY…

R-Day to be celebrated as Raita Rajyotsava – Kurubur Shantakumar
Mysuru, Jan. 09, 2021 (www.justkannada.in): “We have decided to celebrate Republic day as ‘Raita Rajyotsava Day,” said Kuruburu Shantakumar, President, Karnataka State Sugarcane Growers’ Association.
He said that a Sugarcane Growers’ meeting was held at the Kuvmepu Park, near the Gun House in Mysuru, where this decision was taken. The association also has threatened the Govt. of India to withdraw the New Agriculture Policy.Reliance,Company,Boycott,Geo,Sim,Returns,farmers,Exclusive,Protest
Speaking to the media men after the meeting he said, “The Karnataka State Sugarcane Growers’ Association has extended its support to the tractor jatha that will be held on Jan. 26 at New Delhi. “The Govt. of India is coming up with anti-farmer policies. Many farmers have already laid down their lives protesting against the Govt. of India. But they are not understanding. Experts have already explained the disadvantages of the new agri policy. Despite this the govt. of India is adamant. Hence, we have decided to celebrate ‘Raita Rajyotsava’ parallelly on Republic Day, on Jan. 26,” he explained.
Keywords: ‘Raita Rajyotsava’/ Republic Day/ Kuruburu Shantakumar/ Sugarcane Growers’ Association

Key words: Farmer Rajyotsava -celebration – republic day- 26th January – mysore-Kurubur Shantakumar