ಬೆಂಗಳೂರು,ಡಿಸೆಂಬರ್,4,2020(www.justkannada.in): ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆ ನೀಡಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಗಿಬಿದ್ದಿದ್ದು, ಈ ನಡುವೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ತರಾಟೆ ತೆಗೆದುಕೊಂಡಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆಗೆ ಗರಂ ಆಗಿ ಟ್ವಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೊಟ್ಟೆಗೆ ಏನ್ ತಿನ್ತೀದ್ದೀರಾ ಎಂದು ಟ್ವಿಟರ್ ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳಲ್ಲ. ಹಣ ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು. ಉಂಡ ಮನೆಗೆ ದ್ರೋಹ ಬಗೆಯುವ ನಿಮಗೆ ಕೃಷಿ ಖಾತೆಯಲ್ಲಿ ಮುಂದುವರೆಯುವ ನೈತಿಕತೆವಿಲ್ಲವೆಂದು ಕಿಡಿಕಾರಿದ್ದಾರೆ.
ವಿನಾಶಕಾರಿ ಕಾಯಿದೆಗಳನ್ನು ಜಾರಿಗೆ ತಂದು ರೈತರನ್ನು ದೂಡಲು ಹೊರಟಿರುವವರು ಯಾರು..? ನ್ಯಾಯಕ್ಕಾಗಿ ಹೋರಾಡುವ ರೈತರ ಮೇಲೆ ಲಾಠಿಯೇಟು, ಅಶ್ರುವಾಯು, ಜಲಫಿರಂಗಿಗಳ ಮೂಲಕ ದೌರ್ಜನ್ಯವೆಸಗುತ್ತಿರುವ ಕೊಲೆಗಡುಕ ಮನಸ್ಸು ಯಾರದ್ದು ಎಂದು ಸಚಿವ ಬಿ.ಸಿ.ಪಾಟೀಲ್ ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ.
english summary….
Siddaramaiah fury over Minister B.C. Patil’s comments over farmers suicide
Bengaluru, Dec. 4,2020 (www.justkannada.in): While JDS leaders are enraged over Agriculture Minister B.C. Patil, for his comments over farmers’ suicide, leader of the opposition Sri Siddaramaiah has expressed his fury over him.
It can be remembered here that the Agriculture Minister B.C. Patil had said that farmers who commit suicide are cowards, attracting the ire of both JDS and Congress leaders. In his tweet opposition leader, Siddaramaiah has stated that farmers who commit suicide are not cowards. Cowards are those who sell themselves for want of money and power. “You are a backstabber, and you have any moral rights to continue as the agriculture minister.”
Keywords: Siddaramaiah/ Agriculture minister B.C. Patil/ fury/ farmers suicide / cowards
Key words: farmer –succide-minister- bc patil-former CM- siddaramaiah