ಮೈಸೂರು,ಮಾರ್ಚ್,21,2021(www.justkannada.in) : ಸಾಲಬಾಧೆ ಹಿನ್ನೆಲೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕಾನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ರೈತ ಚಲುವೇಗೌಡ(69) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಶರಣಾದ ರೈತರಾಗಿದ್ದಾರೆ.
ಪತ್ನಿ ಮತ್ತು ಚಲುವೇಗೌಡ ಜಂಟಿ ಖಾತೆಯಲ್ಲಿ 5 ಎಕರೆ 7 ಗುಂಟೆ ಕೃಷಿ ಜಮೀನಿದ್ದು, ತಂಬಾಕು ಮತ್ತು ಶುಂಠಿ ಬೆಳೆಯುತ್ತಿದ್ದರು. ಇದಕ್ಕಾಗಿ ಪಿರಿಯಾಪಟ್ಟಣದ ಬ್ಯಾಂಕ್ ಆಫ್ ಬರೋಡದಲ್ಲಿ 8 ಲಕ್ಷ ರೂ. ಸಾಲ ಮತ್ತು ಕೈ ಸಾಲ ಮಾಡಿದ್ದರು.
ಬೆಳೆ ವಿಫಲಗೊಂಡ ಹಿನ್ನೆಲೆ ಸಾಲ ತೀರಿಸಲಾಗದೆ ಚಲುವೇಗೌಡ ಮನನೊಂದಿದ್ದರು. ಪಂಪ್ಸೆಟ್ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದ ಚಲುವೇಗೌಡ ಅವರನ್ನು ಸ್ಥಳೀಯರು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
key words : Farmer-suicide-debt-sterilization