ವಿಜಯನಗರ,ಮೇ,2,2023(www.justkannada.in): ಬಡವರ, ದುರ್ಬಲರ ಕಲ್ಯಾಣಕ್ಕೆ ಡಬಲ್ ಇಂಜಿನ್ ಸರ್ಕಾರ ಪರಿಶ್ರಮಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ರೈತರಿಗೆ ಲಾಭವಾಗಿದೆ. ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರು.
ವಿಜಯನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರದಿಂದ ರೈತರ ಖಾತೆಗೆ 4 ಸಾವಿರ ಹಣ ಹಾಕಲಾಗುತ್ತಿದೆ. ಕೇಂದ್ರ ಸರ್ಕಾರದಿಂದ 6 ಸಾವಿರ ಹಣ ನೇರವಾಗಿ ರೈತರ ಖಾತೆಗೆ ಜಮ ಆಗುತ್ತಿದೆ. ರೈತರ ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ಲಾಭವಾಗುತ್ತಿದೆ. ಪಿಎಂ ಕಿಸಾನ್ ಯೋಜನೆಯಿಂದ 11 ಕೋಟಿ ರೈತರಿಗೆ ಲಾಭವಾಗಿದೆ. ಕಳೆದ ವರ್ಷದಲ್ಲಿಇಲ್ಲಿಯವರೆಗೆ ನಾವು ಎರಡುವರೆ ಲಕ್ಷ ಕೋಟಿ ರೂ. ಹಣ ನೀಡಿದ್ದೇವೆ. ಕರ್ನಾಟಕದಲ್ಲಿ 18 ಸಾವಿರ ಕೋಟಿ ಹಣವನ್ನು ಈ ನಿಧಿ ಮೂಲಕ ನೀಡಿದ್ದೇವೆ. ರಾಜ್ಯದಲ್ಲಿ ಬಡವರಿರಲಿ, ಅಥವಾ ರೈತರಾಗಲಿ ಮತ್ತು ಸಮಾಜದ ಎಲ್ಲ ವರ್ಗದ ಜನರಿಗೆ ನಾವು ಲಾಭವನ್ನು ತಲುಪಿಸಿದ್ದೇವೆ. ಆದ್ದರಿಂದ ಈ ಎಲ್ಲ ವರ್ಗದ ಜನರ ಆಸೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ನುಡಿದರು.
ಭಾರತ ಅಭಿವೃದ್ದಿಯಾಗಬೇಕಾದರೇ ನಿಮ್ಮ ಒಂದು ಮತ ಬಹಳ ಅಮುಲ್ಯವಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಗ್ಯಾರೆಂಟಿಗಳ ಕಂತೆ ಹಿಡಿದುಕೊಂಡು ಕುಳಿತಿದೆ. ಯಾವ ಪಕ್ಷಕ್ಕೆ ತನ್ನ ಅಸ್ತಿತ್ವದ ಬಗ್ಗೆ ಗೊತ್ತಿಲ್ಲವೋ ಆ ಪಕ್ಷ ಸುಳ್ಳಿನ ಗ್ಯಾರೆಂಟಿಗಳನ್ನ ಮಾತ್ರ ನೀಡುತ್ತದೆ. ಕಾಂಗ್ರೆಸ್ ಬಡತನ ಮುಕ್ತ ಆಶ್ವಾಸನೆ ನೀಡಿತು. ಆದರೆ ಬಡತನ ಮುಕ್ತವಾಗಿಲ್ಲ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಕಾಂಗ್ರೆಸ್ ಬಡಜನರ, ರೈತರ ಬಗ್ಗೆ ಬಹಳ ಮಾತನಾಡುತ್ತದೆ ಆದರೆ ಅದು ಹೇಳುವುದೊಂದು ಮಾಡುವುದೊಂದು ಎಂದು ಟೀಕಿಸಿದರು.
ಭಾರತ ಆರ್ಥಿಕ ಕ್ಷೇತ್ರದಲ್ಲಿ 5ನೇ ಸ್ಥಾನದಲ್ಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಬರುತ್ತದೆ. ಇದನ್ನು ನಾವು ಸಾಧಿಸಬೇಕು ಎಂದರೇ ನಮಗೆ ಬಹಳ ದೊಡ್ಡ ಸಹಾಯ ಮಾಡುವುದು ಕರ್ನಾಟಕ. ನಾವು ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯ ಮಾಡುತ್ತೇವೆ. ಎಲ್ಲ ಕ್ಷೇತ್ರಗಳಿಗು ಉತ್ತೇಜನ ನೀಡುತ್ತೇವೆ. ಆದರೆ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಅವರ ಮೋಸಕ್ಕೆ ಒಳಗಾಗಬಾರದು ಎಂದರು.
Key words: Farmers-benefit -double -engine –government-PM Modi