ಸುಗಂಧರಾಜ ಹೂವು ಖರೀದಿ ಮಾಡದ ಕಾರ್ಖಾನೆ ವಿರುದ್ದ ರೈತರ ಪ್ರತಿಭಟನೆ.

ಮೈಸೂರು,ಜೂನ್,3,2024 (www.justkannada.in): ಸ್ಥಳೀಯ ರೈತರಿಂದ ಬೆಳೆದ ಸುಗಂಧರಾಜ ಹೂವು ಖರೀದಿಸುವ ಬದಲು ಬೇರೆ ರಾಜ್ಯದಿಂದ ಹೂವು ಖರೀದಿ ಮಾಡಲಾಗುತ್ತಿದೆ ಎಂದು ಆರೋಪಿಸಿ ವರುಣ ಕ್ಷೇತ್ರ ವ್ಯಾಪ್ತಿಯ ತುಂಬಲ ಗ್ರಾಮದಲ್ಲಿನ ನ್ಯಾಚುರಲ್ ಎಸ್ಸೆನ್ಸಿಯಲ್ ಆಯಿಲ್ ಕಾರ್ಖಾನೆ ವಿರುದ್ದ ರೈತರು ಪ್ರತಿಭಟನೆ ನಡೆಸಿದರು.

ನ್ಯಾಚುರಲ್ ಎಸ್ಸೆನ್ಸಿಯಲ್ ಆಯಿಲ್ ಕಾರ್ಖಾನೆ ಮುಂಭಾಗ ಸುಗಂಧರಾಜ ಹೂವು ಬೆಳೆಗಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ರೈತರಿಂದ ಸುಗಂಧರಾಜ ಹೂವು ಖರೀದಿ ಮಾಡುತ್ತಿಲ್ಲ. ತಮಿಳುನಾಡಿನಿಂದ ಹೂವು ಖರೀದಿ ಮಾಡಲಾಗುತ್ತಿದೆ. ತಮಿಳುನಾಡಿನಿಂದ ತರಿಸಲಾಗುವ ಹೂವಿಗೆ ಕೆಜಿಗೆ 6000 ನೀಡಲಾಗುತ್ತಿದೆ. ನಾವು ನೇರವಾಗಿ ಕಾರ್ಖಾನೆಗೆ 3000 ಕ್ಕೆ ಹೂವನ್ನ ನೀಡುತ್ತಿದ್ದೇವೆ. ಹೀಗಿದ್ದರೂ ಕೂಡ ನಾವು ಬೆಳೆದ ಹೂವನ್ನ ಕಾರ್ಖಾನೆಯವರು ಖರೀದಿ ಮಾಡುತ್ತಿಲ್ಲ. ಸ್ಥಳೀಯ ರೈತರಿಂದ ಬೆಳೆದ ಹೂವನ್ನೇ ಕಾರ್ಖಾನೆ ಮಾಡಬೇಕು ಎಂದು ಪ್ರತಿಭಟನನಿರತ ರೈತರ ಒತ್ತಾಯ ಮಾಡಿದರು.

Key words: Farmers, protest, factory, Sugandharaja, flowers