ಕೊಲ್ಲಾಪುರ,ಮೇ,31,2022(www.justkannada.in): ನಿನ್ನೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ವೇಳೆ ರಾಜಕೀಯ ಪ್ರಚೋದಿತ ಗೂಂಡಾಗಳು ರಾಷ್ಟ್ರೀಯ ರೈತ ಮುಖಂಡರ ಮೇಲೆ ಕಪ್ಪುಮಸಿ ಎರಚಿ, ಗೂಂಡಾ ವರ್ತನೆ ನಡೆಸಿ ಹಲ್ಲೆ ಮಾಡಲು ಯತ್ನಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮಹಾರಾಷ್ಟ್ರದ ಕೊಲ್ಲಾಪುರ, ಸಾವು ಮಹಾರಾಜ್ ವೃತ್ತದಲ್ಲಿ ರೈತರು ರೈತ ಮಹಿಳೆಯರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ರಾಜಕೀಯ ಪ್ರಚೋದಿತ ಗೂಂಡಾಗಳಿಗೆ ಧಿಕ್ಕಾರ, ರೈತ ಹೋರಾಟಕ್ಕೆ ಜಯವಾಗಲಿ, ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ ಕುರುಬೂರು ಶಾಂತಕುಮಾರ್ ಮಾತನಾಡಿ, ಗೂಂಡಾಗಳ ಮೂಲಕ ರಾಜಕೀಯ ಪಕ್ಷದ ಮುಖಂಡರು ರೈತ ಮುಖಂಡರನ್ನ ಬಗ್ಗುಬಡಿಯಲು ಯತ್ನಿಸುತ್ತಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದ ಅವಮಾನವನ್ನು ಸಹಿಸಲಾಗದೆ ಇಂತಹ ವಾಮಮಾರ್ಗದ ಹುನ್ನಾರ ನಡೆಸಿದ್ದಾರೆ. ರಾಜ್ಯದ ರೈತರು ಸುಮ್ಮನೆ ಕೂರಲು ಸಾಧ್ಯವಿಲ್ಲ. ತಕ್ಷಣವೇ ರಾಜ್ಯ ಸರ್ಕಾರ ನೆನ್ನೆ ಘಟನೆ ಬಗ್ಗೆ ನಿರ್ಧಾರ ತಿಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಗುರುಸಿದ್ದಪ್ಪ, ಮೋಹನ್ ಪಂಡಿತ್, ಎಸ್ಪ್ ಸಿದ್ದ್ನಾಳ, ಬರಡನಪುರ ನಾಗರಾಜ್, ಶಿವಮೂರ್ತಿ ,ಸಿದ್ದೇಶ್, ಪದ್ಮ ಗೌರಿಶಂಕರ, ಗುರುಸ್ವಾಮಿ, ಮುಂತಾದವರಿದ್ದರು.
Key words: farmers-protest –Kolhapur-condemning -Rakesh Tikayat -attack