ಮೈಸೂರು,ಜನವರಿ,25,2021(www.justkannada.in) : ದೇಶದ ಇತಿಹಾಸದಲ್ಲಿ ಗಣರಾಜ್ಯೋತ್ಸವವನ್ನ ಬಹಳ ಸಂತೋಷದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿಯ ಗಣರಾಜ್ಯೋತ್ಸವ ಆಚರಣೆ ಗಣತಂತ್ರ ವ್ಯವಸ್ಥೆಗೆ ಧಕ್ಕೆ ಬಂದಿದೆ. ರೈತರ ಆಹ್ವಾಲುಗಳನ್ನ ಸರ್ಕಾರ ಪರಿಗಣಿಸದೇ ಇರುವುದು ಶೋಚನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಬೇಸರವ್ಯಕ್ತಪಡಿಸಿದ್ದಾರೆ.
ಸುತ್ತೂರು ಶ್ರೀಗಳ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಗಣರಾಜ್ಯೋತ್ಸವ ದಿನದಂದು ರೈತ ರಾಜ್ಯೋತ್ಸವ (ಟ್ರ್ಯಾಕ್ಟರ್ ರ್ಯಾಲಿ)ಕ್ಕೆ ನಮ್ಮ ಬೆಂಬಲವಿದೆ. ಇಡೀ ದೇಶದ ಎಲ್ಲಾ ಭಾಗದಲ್ಲೂ ರೈತರು ನಾಳೆ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಪರವಾಗಿ ನಮ್ಮ ಪಕ್ಷ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್
ಕುರುಬ ಸಮುದಾಯದಿಂದ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಬಹಿಷ್ಕಾರ ಮಾಡಲಾಗುತ್ತೆ ಎಂಬ ವಿಶ್ವನಾಥ್ ಹೇಳಿಕೆ ವಿಚಾರ. ವಿಶ್ವನಾಥ್ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಬಹಳಷ್ಟು ದಿನ ಇದ್ದವರು. ಆದರೆ, ಸಿದ್ದರಾಮಯ್ಯ ಅವರ ಕುರಿತು ಹೇಳಿಕೆ ಬೇಜಾವಾಬ್ದಾರಿ ಹೇಳಿಕೆಯಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್ ಎಂದರು.
ಸಿದ್ದರಾಮಯ್ಯ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ನಾಯಕರು. ಎಲ್ಲಾ ಸಮಾಜದ ಜನರಿಗೂ ಸಲ್ಲುವಂತಹ ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಅಂತಹವರ ಬಗ್ಗೆ ಬೇಜಾವಾಬ್ದಾರಿತನದ ಹೇಳಿಕೆ ಸರಿಯಲ್ಲ ಎಂದಿದ್ದಾರೆ.
ಸರ್ಕಾರದ ವ್ಯವಸ್ಥೆ ನೋಡಿದರೆ ಹಿಂದಿನ ಬಿ.ಎಸ್.ವೈ ಸರ್ಕಾರದಂತೆ ಬೇಗ ಬೀಳಲಿದೆ
ಬಿಜೆಪಿ ಸರ್ಕಾರ ಇರುವಂತಹ ಅನುಧಾನಗಳನ್ನೇ ಸರಿಯಾಗಿ ಬಳಕೆಮಾಡಿಲ್ಲ. ಇರುವಂತಹ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೇಂದ್ರದಿಂದಲೂ ಸಹಕಾರ ದೊರೆಯುತ್ತಿಲ್ಲ, ಆದ್ದರಿಂದ ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಕಿಡಿಕಾರಿದರು.ಯಾವುದೇ ಜನಪರ ಕೆಲಸವು ನಡೆಯುತ್ತಿಲ್ಲ. ಸಚಿವರ ನಡುವೆ ಖಾತೆ ಬದಲಾವಣೆಯಾಗುತ್ತಿದೆ. ಹಿರಿಯ ನಾಯಕರ ನಡುವೆ ಆಂತರಿಕ ಕಿತ್ತಾಟ ಹೆಚ್ಚಾಗಿದೆ. ಇದು ಬಿಜೆಪಿಯಲ್ಲಿ ಹೊಸದೇನಲ್ಲ. ಈ ಹಿಂದೆ ಅವರ ಸರ್ಕಾರ ಇದ್ದಾಗಲೂ ಇದೆ ಮಾದರಿಯ ಆಂತರಿಕ ಕಚ್ಚಾಟವಾಗಿತ್ತು. ಈ ಎಲ್ಲ ಬೆಳವಣಿಗೆ ನೋಡುತ್ತಿದ್ದರೆ ಈ ಹಿಂದೆ ಆಗಿದ್ದ ಬೆಳವಣಿಗೆ ಉಂಟಾಗಬಹುದು ಎಂದು ಸಂಶಯವ್ಯಕ್ತಪಡಿಸಿದರು.
key words : Farmers-Demands-Government-Not considering-Miserable-KPCC-Executive-President-R.Dhruvanarayan