ಮೈಸೂರು,ಫೆಬ್ರವರಿ,16,2021(www.justkannada.in): ದೇಶಾದ್ಯಂತ ನಿನ್ನೆ ಮಧ್ಯರಾತ್ರಿಯಿಂದಲೇ ಎಲ್ಲ ವಾಹನಗಳಿಗೂ ಇಂದಿನಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಇಂದಿನಿಂದ ದುಪ್ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ.
ನಿನ್ನೆ ರಾತ್ರಿಯಿಂದಲೇ ದೇಶಾದ್ಯಂತ ಹೊಸ ನಿಯಮ ಜಾರಿಯಾಗಿದೆ. ಆದರೆ ಮೈಸೂರಿನ ಟೋಲ್ ನಲ್ಲಿ ಈ ಆದೇಶ ಜಾರಿಯಾಗಿಲ್ಲ. ಹೌದು ಫಾಸ್ಟ್ಯಾಗ್ ಇಲ್ಲದ ವಾಹನಗಳ ಬಳಿಯೂ ಮೊದಲಿನಷ್ಟೇ ಹಣ ಸಂಗ್ರಹ ಮಾಡಲಾಗುತ್ತಿದೆ.
ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳ ಬಳಿಯೂ ಮೊದಲಿನಷ್ಟೇ ಹಣ ಸಂಗ್ರಹ ಮಾಡಲಾಗುತ್ತಿದೆ. ಕಾರುಗಳಿಗೆ 50, ಮಿನಿಬಸ್ 75, ಟ್ರಕ್ 160, 3 ಆ್ಯಕ್ಸೆಲ್ ವಾಹನ 175, 4ರಿಂದ 6 ಆ್ಯಕ್ಸೆಲ್ 255, 7 ಆ್ಯಕ್ಸೆಲ್ ವಾಹನ 310 ರೂ ಸಂಗ್ರಹಿಸಲಾಗುತ್ತಿದೆ.
ಬೇರೆ ಕಡೆ ಫಾಸ್ಟೈಗ್ ಇಲ್ಲದ ವಾಹನಗಳಿಗೆ ಸಿಬ್ಬಂದಿ ಡಬಲ್ ಟೋಲ್ ಕಟ್ಟಿಸಿಕೊಳ್ಳುತ್ತಿದ್ದು ಆದರೆ ಮೈಸೂರಿನಲ್ಲಿ ಮಾತ್ರ ಅಷ್ಟೇ ಹಣ ಸಂಗ್ರಹ ಮಾಡಲಾಗುತ್ತಿದೆ.
Key words: Fastag- compulsory –Order-not enforced – toll -Mysore.