ದೇಶದಲ್ಲಿ ಭಯದ ವಾತಾವರಣ: ಭಾರತದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದಾರೆ- ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ,ಜುಲೈ,29,2024 (www.justkannada.in): ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದೇಶದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದು ಆ ಚಕ್ರವ್ಯೂಹಕ್ಕೆ ದೇಶ ಸಿಲುಕಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲ ಭಯದ ವಾತಾವರಣ ಸೃಷ್ಠಿಯಾಗಿದೆ ರೈತರು,  ಭಾರತದ ಸುತ್ತ ಮೋದಿ ಚಕ್ರವ್ಯೂಹ ಹೆಣೆದಿದ್ದಾರೆ.  ಚಕ್ರವ್ಯೂಹ 1 ಸಣ್ಣ ವ್ಯಾಪಾರಿಗಳ ಮೇಲೆ ಟ್ಯಾಕ್ಸ್, ಚಕ್ರವ್ಯೂಹ 2 ನೋಟ್ ಬ್ಯಾನ್ ,  ಚಕ್ರವ್ಯೂಹ 3 ಜಿಎಸ್ ಟಿ ಮೂಲಕ ಜನಸಾಮಾನ್ಯರಿಂದ ವಸೂಲಿ. ಚಕ್ರವ್ಯೂಹದಲ್ಲಿ ದೇಶವನ್ನ ದೂಡುತ್ತಿದ್ದಾರೆ. ಉದ್ಯೋಗ ನೀಡುವವರ ಮೇಲೆ ಈ ಚಕ್ರವ್ಯೂಹ ದಾಳಿ ನಡೆಸುತ್ತಿದೆ. ಸಣ್ಣ ಮಧ್ಯಮ ಕೈಗಾರಿಕೆಗಳನ್ನ ಈಗಾಗಲೇ ಮುಚ್ಚಿದ್ದಾರೆ. ಹೊಸ ಚಕ್ರವ್ಯೂಹದಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ  ಎಂದು ಹರಿಹಾಯ್ದರು.

ಬಜೆಟ್ ನಲ್ಲಿ ಯುವಕರಿಗೆ ಏನು ಕೊಟ್ಟಿಲ್ಲ.  ರೈತರು, ಮಹಿಳೆಯರ ಕಲ್ಯಾಣಕ್ಕೆ ಏನು ಯೋಜನೆ ಘೋಷಿಸಿಲ್ಲ. ರೈತರ ಎಂಎಸ್ ಪಿ ಬೇಡಿಕೆಯನ್ನ ಈಡೇರಿಸಿಲ್ಲ. ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣುವ ಸ್ವಾತಂತ್ರ್ಯವಿದೆ. ಬಿಜೆಪಿಯಲ್ಲಿ ನರೇಂದ್ರ ಮೋದಿ ಹೊರತುಪಡಿಸಿ ಬೇರೆ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.

Key words: fear, Atmosphere, country, India, modi, Rahul Gandhi