ಬೆಂಗಳೂರು, ಜನವರಿ 30, 2019 (www.justkannada.in): ಅಭಿಮಾನಿಗಳೊಂದಿಗೆ ಸದಾ ನಗುತ್ತಾ ಮಾತನಾಡುತ್ತಿದ್ದ ಸನ್ನಿ ಲಿಯೋನ್ ಈಗ ದೂರ ಉಳಿಯುತ್ತಿದ್ದಾರೆ!
ಯಾರಾದರೂ ವಿಶ್ ಮಾಡುತ್ತಾ ಸೆಲ್ಫಿ ಕೇಳಲು ಬಂದರೆ ಸಾಕು ದೂರ ಓಡುತ್ತಿದ್ದಾರಂತೆ. ಸನ್ನಿ ಲಿಯೋನ್ರಲ್ಲಿ ಆಗಿರುವ ಈ ಬದಲಾವಣೆಗೂ ಕಾರಣ ಇದೆ. ಕರೋನಾ ವೈರಸ್ ಭೀತಿ!
ದೇಶದಿಂದ ಹೊರ ಇರುವ ಸನ್ನಿ ಎಲ್ಲೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ತೊಡುತ್ತಿದ್ದಾರೆ. ತಾವು ಭೇಟಿ ಮಾಡಿದವರಿಗೂ ಮಾಸ್ಕ್ ತೊಡುವಂತೆ ಸಲಹೆ ನೀಡುತ್ತಿದ್ದಾರೆ. ಮೊದಲು ಆರೋಗ್ಯ ಮುಖ್ಯ. ಯಾವುದನ್ನೂ ನಿರ್ಲಕ್ಷಿಸಬೇಡಿ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶದೆಲ್ಲೆಡೆ ಈ ಕರೋನಾ ವೈರಸ್ ಭೀತಿ ಇದೆ. ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್ಗೆ ನೂರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇನ್ನೂ ಭಾರತದಲ್ಲೂ 21 ವಿಮಾನ ನಿಲ್ದಾಣಗಳಲ್ಲಿ ನಿಗಾ ವಹಿಸಲಾಗಿದೆ.