ಆನ್ ಲೈನ್ ಕ್ಲಾಸ್ ಗೆ ಫೀಸ್ ಕಟ್ಟಿ ಅಂದ್ರೆ ಕ್ರಮ ಕೈಗೊಳ್ಳಿ-ಸಂಸದ ಶ್ರೀನಿವಾಸ್ ಪ್ರಸಾದ್…

 

ಮೈಸೂರು,ನವೆಂಬರ್,25,2020(www.justkannada.in):  ಖಾಸಗಿ ಶಾಲೆಗಳು ನಮ್ಮ ಕೈಯಲ್ಲಿ ಇದೆ. ನಾವು ಶಾಲೆಗಳ ಕೈಯಲ್ಲಿ ಇಲ್ಲ. ಆನ್ ಲೈನ್ ಕ್ಲಾಸ್ ಗೆ ಫೀಸ್ ಕಟ್ಟಿ ಅಂದ್ರೆ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಖಾಸಗಿ ಶಾಲೆಗಳು ಆನ್ ಲೈನ್ ಕ್ಲಾಸ್ ಗೆ ಫೀಸ್ ಕಟ್ಟಿ ಅಂದ್ರೆ ಕ್ರಮ ಕೈಗೊಳ್ಳಿ. ಅದಕ್ಕೆ ಅವರು ಹಂಗ್ ಮಾಡಿದ್ರು ಇಂಗ್ ಮಾಡಿದ್ರು ಅಂತ ಕಿರುಚಾಡೋದು ಬೇಡ. ಸರ್ಕಾರ ಇಂತಹ ವಿಚಾರದಲ್ಲಿ‌ ಗಂಭೀರವಾಗಿರಬೇಕು ಎಂದರು.I didn't knew CM BSY will think so cheaply - KPCC President D.K. Shivakumar

ಅವನು ನನ್ನ ಉಗುರಿಗು ಸಮನಲ್ಲ- ಸಂಸದ ಶ್ರೀನಿವಾಸ್ ಪ್ರಸಾದ್ ಕೆಂಡಾಮಂಡಲ…

ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಧೃವನಾರಾಯಣ್ ವಿರುದ್ದ ಸಂಸದ ಶ್ರೀನಿವಾಸ್ ಪ್ರಸಾದ್  ಕಿಡಿಕಾರಿದ್ದಾರೆ. ಅವನು ನನ್ನ ಉಗುರಿಗು ಸಮನಲ್ಲ. ಅವನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡೋಲ್ಲ. ಎರಡು ಸಲ ಸಂಸದನಾಗಿದ್ದವನು ಎಂಥ ಹೇಳಿಕೆ‌ ನೀಡಬೇಕು. ಅಂತ ಬಾಲಿಷ ಹೇಳಿಕೆಗೆ ನಾನು ಪ್ರತಿಕ್ರಿಯಿಸೋಲ್ಲ ಎಂದು ವಾಗ್ದಾಳಿ ನಡೆಸಿದರು.

ಅಹ್ಮದ್ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ ಶ್ರೀನಿವಾಸ್ ಪ್ರಸಾದ್, ದೀರ್ಘಕಾಲದ ರಾಜಕಾರಣ ಮಾಡಿದ ರಾಜಕಾರಣಿಯನ್ನ‌ ಕಳೆದುಕೊಂಡಿದ್ದೇವೆ. ಅವರ ನಿಧನದ ಸುದ್ದಿ ಅಘಾತ ತಂದಿದೆ. ಕಾಂಗ್ರೆಸ್‌ನಲ್ಲಿ ಉತ್ತಮ ನಾಯಕರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

Key words: fee – online class -take action- private school-MP- Srinivas Prasad-mysore