ಮೈಸೂರು,ನವೆಂಬರ್,25,2020(www.justkannada.in) : ಖಾಸಗಿ ಶಾಲೆಗಳಿಂದ ಆನ್ಲೈನ್ ಶಿಕ್ಷಣಕ್ಕೆ ಫೀಸ್ ವಿಚಾರ ಸಂಬಂಧ ಈ ಬಗ್ಗೆ ಶಿಕ್ಷಣ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನ ಸುತ್ತೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್ , ಆನ್ಲೈನ್ ಶಿಕ್ಷಣಕ್ಕೆ ಖಾಸಗಿ ಶಾಲೆಗಳು ಫೀಸ್ ಕೇಳುತ್ತಿರುವ ವಿಚಾರ. ಈ ಬಗ್ಗೆ ಶಿಕ್ಷಣ ಇಲಾಖೆ ಕಠಿಣ ನಿರ್ಧಾರ ಕೈಗೊಳ್ಳಬೇಕು. ಕೇವಲ ಕಠಿಣ ನಿರ್ಧಾರವಲ್ಲ ಅದನ್ನ ಕಾರ್ಯರೂಪಕ್ಕೆ ತರಬೇಕು.
ನಮಗೆಲ್ಲ ಸಂಬಳ ಹಿಡಿದಿದ್ದಾರೆ. 30% ಸಂಬಳ ಹಿಡಿದು ಟಿಎಡಿಎ ಕಟ್ ಮಾಡಿದ್ದಾರೆ. ಆದ್ರೆ ಸರ್ಕಾರ ನೌಕರರಿಗೆ ಮಾತ್ರ ಸಂಬಳ ಹಿಡಿಯುತ್ತಿಲ್ಲವೇಕೆ. ಎಲ್ಲರು ಸಮಾನರು ಅಲ್ಲವೇ? ಎಲ್ಲರಿಗೂ ಒಂದೆ ಥರ ಇರಬೇಕು ಎಂದು ಹೆಚ್.ವಿಶ್ವನಾಥ್ ಹೇಳಿದರು.
ಕೋವಿಡ್ ಕಂಟ್ರೋಲ್ ಯಾರು ಮಾಡಬೇಕು ಹಾಗಾದ್ರೆ. ಕೋವಿಡ್ ಕಂಟ್ರೋಲ್ ಮಾಡೋದರಲ್ಲಿ ಅಧಿಕಾರಿಗಳ ಪಾತ್ರವೇನು..? ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಸಲಹೆ ನೀಡಿದರು.
Key words: Fees – online -education – private schools-tough decision -MLC -H. VISHWANATH.