ಮರಗಳ ಹನನ, ಮುಡಾ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ: ವಾರದೊಳಗೆ ವರದಿಗೆ ಸೂಚನೆ.

Felling of trees, formation of committee under muda commissioner's chairmanship: Report within a week.

ಮೈಸೂರು, ಏ.೨೨,೨೦೨೫:  ನಗರದ ಹೈದರ್ ಅಲಿ ರಸ್ತೆ ಅಗಲೀಕರಣಕ್ಕಾಗಿ 40 ಮರಗಳನ್ನು ಕಡಿದಿರುವ ಪ್ರಕರಣದ ಕುರಿತು ವಾಸ್ತವತೆ ಪರಿಶೀಲಿಸಿ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸಮಿತಿ ರಚಿಸಿದ ಜಿಲ್ಲಾಡಳಿತ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಕಚೇರಿ, ಮೈಸೂರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನ ಹೈದರ್ ಅಲಿ ರಸ್ತೆ ಅಗಲೀಕರಣಕ್ಕಾಗಿ ರಾತ್ರೋರಾತ್ರಿ ಮರಗಳನ್ನು ಕಡಿದಿರುವ ಪ್ರಕರಣದ ಕುರಿತು ಮಾದ್ಯಮ, ಪರಿಸರ ವಾದಿಗಳು/ ಸಾರ್ವಜನಿಕ ವಲಯಗಳಿಂದ ತೀವ್ರತರ ವಿರೋಧಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವುದನ್ನು ಗಮನಿಸಿದೆ. ಈ ಹಿನ್ನಲೆಯಲ್ಲಿ ಸದರಿ ಹೈದರ್ ಅಲಿ ರಸ್ತೆಯ ಅಗಲೀಕರಣಕ್ಕಾಗಿ 40 ಮರಗಳನ್ನು ಕಡಿದಿರುವ ಪ್ರಕರಣದ ವಾಸ್ತವತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಈ 3 ಸದಸ್ಯರುಗಳನ್ನು ಒಳಗೊಂಡ ತನಿಖಾ ಸಮಿತಿ ರಚಿಸಲಾಗಿದೆ.

ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು (ಅಧ್ಯಕ್ಷರು), ಉಪ ಅರಣ್ಯ ಸಂರಕ್ಷಣಾಧಿಕಾರಿ, ಹುಣಸೂರು(ಸದಸ್ಯರು),ಕಾರ್ಯನಿರ್ವಾಹಕ ಅಭಿಯಂತರರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮೈಸೂರು( ಕಾರ್ಯದರ್ಶಿ)

ಮೇಲ್ಕಂಡ ಸಮಿತಿಯು, ಈ ಕೆಳಕಂಡ ಅಂಶಗಳ ಕುರಿತು ಪರಿಶೀಲಿಸಲು ಸೂಚಿಸಿದೆ.

ಮುಡಾ ಆಯುಕ್ತ ಎ.ಎನ್.ರಘುನಂದನ್

ಪ್ರಾಥಮಿಕವಾಗಿ ರಸ್ತೆ ಅಗಲೀಕರಣದ ಅಗತ್ಯತೆ ಬಗ್ಗೆ ಪರಿಶೀಲಿಸುವುದು. 40 ಮರಗಳನ್ನು ಕತ್ತರಿಸುವ ಅನಿವಾರ್ಯತೆ ಕುರಿತು ತಾಂತ್ರಿಕವಾಗಿ ಪರಿಶೀಲಿಸುವುದು ಜತೆಗೆ  ಮರ ಕತ್ತರಿಸಲು ಅನುಮತಿಸಲು ಎಲ್ಲಾ ಶಾಸನಬದ್ದ ಕಾರ್ಯವಿಧಾನಗಳನ್ನು ಅನುಸರಿಸಿ, ನಿಯಮಬದ್ದವಾಗಿ ಅನುಮತಿಸಿರುವುದನ್ನು ಪರಿಶೀಲಿಸುವುದು.

ತನಿಖೆಗೆ ನೇಮಿಸಿರುವ ಸಮಿತಿಯು ಮೇಲ್ಕಂಡ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಿ ವಾಸ್ತವಾಂಶ ವರದಿಯನ್ನು ಈ ಆದೇಶವಾದ 7 ದಿವಸದೊಳಗೆ ಸಮಿತಿಯ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಲು ಆದೇಶಿಸಿದೆ.

key words: Felling of trees, formation of committee, MUDA commissioner, Mysore

Felling of trees, formation of committee under muda commissioner’s chairmanship: Report within a week.