ನವದೆಹಲಿ,ಆ,1,2019(www.justkannada.in): ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನ ಪ್ರಶ್ನಿಸಿ 15 ಮಂದಿ ಅನರ್ಹ ಶಾಸಕರು ಇದೀಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ತಮ್ಮನ್ನ ಅನರ್ಹಗೊಳಿಸಿ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಹೊರಡಿಸಿದ್ದ ಆದೇಶದ ವಿರುದ್ದ 15 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅನರ್ಹ ಶಾಸಕರಾದ ಹೆಚ್.ವಿಶ್ವನಾಥ್, ಬಿ.ಸಿಪಾಟೀಲ್, ನಾರಾಯಣ್ ಗೌಡ,ಗೋಪಾಲಯ್ಯ, ಎಸ್ .ಟಿ ಸೋಮಶೇಖರ್, ಭೈರತಿ ಬಸವರಾಜ್, ಪ್ರತಾಪ್ ಗೌಡ ಪಾಟೀಲ್ ಸೇರಿ 15 ಮಂದಿ ಸ್ಫೀಕರ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ ಬಿ.ಸಿ ಪಾಟೀಲ್, ಸುಪ್ರೀಂಕೋರ್ಟ್ ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಅನರ್ಹಕ್ಕೂ ಮೊದಲು ವಿಚಾರಣೆಗೆ ಅವಕಾಶ ನೀಡಬೇಕಿತ್ತು. ಆದರೆ ಸ್ಪೀಕರ್ ತಮ್ಮ ದೃಷ್ಠಿಕೋನದಲ್ಲಿ ತೀರ್ಪು ನೀಡಿದ್ದಾರೆ. ಅನರ್ಹಗೊಂಡ ಶಾಸಕರೆಲ್ಲರೂ ಒಗ್ಗಟ್ಟಾಗಿದ್ದೇವೆ. ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತೆ ನೋಡೋಣ ಎಂದರು.
Key words: Fifteen- disqualified-MLAS- Supreme Court –against- Speaker’s -order.