ಮೈಸೂರು,ಸೆಪ್ಟಂಬರ್,15,2021(www.justkannada.in): ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದ್ದು, ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ರವಿ ಎಂಬಾತ ಬಿಜೆಪಿ ಕಾರ್ಯಕರ್ತ ಉದಯರವಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಮಹದೇವಮ್ಮ ದೇಗುಲದ ನಿರ್ವಹಣೆಗೆ ಕಮಿಟಿ ರಚಿಸುವ ವಿಚಾರದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ದ್ವೇಷ ಉಂಟಾಗಿ ಈ ಗಲಾಟೆ ನಡೆದಿದೆ.
ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಭೇಟಿ ನೀಡಿ ನಿರ್ಗಮಿಸಿದ ಬಳಿಕ ಈ ಹೊಡೆದಾಟ ನಡೆದಿದ್ದು, ವಿಚಾರ ತಿಳಿದ ಕೂಡಲೇ ಗ್ರಾಮಕ್ಕೆ ತೆರಳಿದ ಹುಲ್ಲಹಳ್ಳಿ ಠಾಣಾ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು.
ಇನ್ನು ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಉದಯರವಿ ಸಹೋದರು ಮಚ್ಚು ಲಾಂಗು ಹಿಡಿದು ಕಾಂಗ್ರೆಸ್ ಕಾರ್ಯಕರ್ತ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ತಲೆದೋರಿದೆ.
Key words: fight –between- Congress – BJP –workers-nanjanagudu-ucchgani -village