ಬೆಂಗಳೂರು,ಏಪ್ರಿಲ್,4,2022(www.justkannada.in): ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಹಾಲಾಲ್ ಕಟ್ ನಿಷೇಧ ಹೀಗೆ ಅಭಿಯಾನ ಆರಂಭಿಸಿರುವ ಹಿಂದೂಪರ ಸಂಘಟನೆಗಳ ವಿರುದ್ಧ ಟೀಕಾಪ್ರಹಾರ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಸವಾಲೊಂದನ್ನ ಹಾಕಿದ್ದಾರೆ.
ಮಾಧ್ಯಮಗಳ ಜತೆ ಇಂದು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಹಲಾಲ್ ಕಟ್, ಜಟ್ಕಾ ಕಟ್ ಬಿಟ್ಟುಬಿಡಿ. ಬೆಲೆ ಏರಿಕೆ ವಿರುದ್ಧ ಹೋರಾಡಿ. ನಾನು ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರುತ್ತೇನೆ. ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ರೆಡಿ ಇದ್ದೀರಾ..? ಎಂದು ಸವಾಲು ಹಾಕಿದ್ದಾರೆ.
ಮೌನಿ ಸಿಎಂ ಬಸವರಾಜ ಬೊಮ್ಮಾಯಿ..
ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಟೀಕಿಸಿರುವ ಹೆಚ್.ಡಿ ಕುಮಾರಸ್ವಾಮಿ, ಇಷ್ಟೆಲ್ಲಾ ವಿವಾದ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಹೆಚ್.ಡಿಕೆ ಗಾಳಿಪಟ, ಸ್ವಂತಿಕೆ ಇಲ್ಲದ ರಾಜಕಾರಣಿ ಎಂದು ಕುಟುಕಿದ್ದ ರಾಜ್ಯ ಬಿಜೆಪಿಗೆ ಟಾಂಗ್ ನೀಡಿದ ಹಚ್.ಡಿ ಕುಮಾರಸ್ವಾಮಿ, ಮುಂದಿನ ಚುನಾವಣೆಯಲ್ಲಿ ಗಾಳಿಪಟದ ಶಕ್ತಿ ಏನೆಂದು ತೋರಿಸುತ್ತೇನೆ ಎಂದರು.
Key words: Fight-price-hike-HD Kumaraswamy- Challenge
ENGLISH SUMMARY…
“Fight against price hike, I will also join you wearing a saffron shawl: HDK challenges Pro-Hindu orgnaizations
Bengaluru, April 4, 2022 (www.justkannada.in): Continuing his tirade against the Pro-Hindu organizations, which have started a campaign against imposing regulations against Muslim traders, Halal cut, etc., the former Chief Minister has given a new challenge to the Pro-Hindu organizations.
Speaking to the media persons today, he said, “leave Halal Cut and Jatka Cut. If you have the guts to fight against the price hike. I will also join you wearing a saffron shawl. Are you ready for it?” he challenged.
Criticizing Chief Minister Basvaraj Bommai on the occasion, H.D. Kumaraswamy said why is Chief Minister Bommai silent though so many things are happening in the state. “He was alleging Manmohan Singh as a silent person, but why is he silent now? The present State Government is being remote-controlled it is not functioning independently. It is working only to impress the RSS. But this is not Uttar Pradesh it is Karnataka. Let them work to create harmony,” he said.
Keywords: Former CM H.D. Kumaraswamy/ BJP/ struggle/ against price hike