ನವದೆಹಲಿ,ಜನವರಿ,16,2021(www.justkannada.in): ಕೊರೋನಾ ಲಸಿಕೆ ಅಭಿಯಾನಕ್ಕೆ ಇಂದು ದೇಶಾದ್ಯಂತ ಚಾಲನೆ ದೊರೆತಿದ್ದು, ಕೊರೋನಾ ವಿರುದ್ಧ ಲಸಿಕೆ ಸಂಜೀವಿನಿ ರೀತಿ ಹೋರಾಡುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೋನಾ ಲಸಿಕೆ ಅಭಿಯಾನ ಕುರಿತು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಈ ದಿನ ಬಹಳ ಸಂತೋಷ.ತೃಪ್ತಿ ಪಡುವ ದಿನ. ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಕೊರೋನಾ ವಿರುದ್ಧ ಹೋರಾಟ ಮಾಡಿದ್ದೇವೆ. ಕೊರೋನಾ ಹೋರಾಟದಲ್ಲಿ ಅಂತಿಮ ಹಂತ ತಲುಪಿದ್ದೇವೆ. ಕೊರೋನಾ ವಿರುದ್ಧ ಲಸಿಕೆ ಸಂಜೀವಿನಿ ರೀತಿ ಹೋರಾಡುತ್ತದೆ ಎಂದರು.

ಕೊರೋನಾ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ತಿಳಿಸಿದರು.
Key words: fighting- against – coronavirus – vaccine-Union Health Minister -Dr Harshvardhan.